ದೀಪ್ತಿ ಸರ್ಣಾ
ದೀಪ್ತಿ ಸರ್ಣಾ

ದೀಪ್ತಿ ಸರ್ಣಾ ಅಪಹರಣ: ಸೈಕೋ ಕಿಡ್ನಾಪರ್ಗೆ ಶಾರುಕ್ ನ ಡರ್ ಚಿತ್ರ ಸ್ಫೂರ್ತಿ!

ಸ್ನ್ಯಾಪ್ ಡೀಲ್ ಉದ್ಯೋಗಿ ದೀಪ್ತಿ ಸರ್ಣಾ ಅಪಹರಣ ಪ್ರಕರಣಕ್ಕೆ ಇಂಟರೆಸ್ಟಿಂಗ್ ಟ್ಚಿಸ್ಟ್ ಸಿಕ್ಕಿದ್ದು, ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅಭಿನಯದ ಡರ್ ಚಿತ್ರದ...
Published on

ನವದೆಹಲಿ: ಸ್ನ್ಯಾಪ್ ಡೀಲ್ ಉದ್ಯೋಗಿ ದೀಪ್ತಿ ಸರ್ಣಾ ಅಪಹರಣ ಪ್ರಕರಣಕ್ಕೆ ಇಂಟರೆಸ್ಟಿಂಗ್ ಟ್ಚಿಸ್ಟ್ ಸಿಕ್ಕಿದ್ದು, ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅಭಿನಯದ ಡರ್ ಚಿತ್ರದ ಸ್ಫೂರ್ತಿಯಿಂದಾಗಿ ಸೈಕೋ ಕಿಡ್ನಾಪರ್ ಆಕೆಯನ್ನು ಅಪಹರಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಗಜಿಯಾಬಾದ್ ಎಸ್ಎಸ್ಪಿ ಧರ್ಮೇಂದ್ರ ಯಾದವ್ ಪ್ರಮುಖ ಆರೋಪಿ ದೇವೆಂದರ್ ನಾಲ್ವರು ಸ್ನೇಹಿತರ ಬೆಂಬಲದೊಂದಿಗೆ ದೀಪ್ತಿ ಅಪಹರಣಕ್ಕೆ ಪ್ಲಾನ್ ಮಾಡಿದ್ದರು ಎಂದು ತಿಳಿಸಿದ್ದು, ಈ ಪ್ರಕರಣ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿಯು 27 ವರ್ಷದ ಯುವಕನಾಗಿದ್ದು, ಆತ ದೀಪ್ತಿಯನ್ನು ಒಂದು ವರ್ಷದಿಂದ ಹುಚ್ಚುಚ್ಚಾಗಿ ಪ್ರೀತಿಸುತ್ತಿರುತ್ತಾನೆ. ಮೆಟ್ರೋ ನಿಲ್ದಾಣದಲ್ಲಿ ಮೊದಲ ಬಾರಿಗೆ ನೋಡಿದ ಬಳಿಕ ಆಕೆಯ ಮೇಲೆ ಆತನಿಗೆ ಪ್ರೇಮಾಂಕುರವಾಗಿರುತ್ತದೆ. ಆಗಿನಿಂದ ಆಕೆಯನ್ನು ಪ್ರೀತ್ಸೆ ಪ್ರೀತ್ಸೆ ಎಂದು ಪೀಡಿಸುತ್ತಿರುತ್ತಾನೆ.

ಇಂಥದ್ದೇ ಹುಚ್ಚು ಲವರ್'ನ ಕಥಾವಸ್ತುವಿರುವ ಶಾರುಕ್ ಖಾನ್ ಅಭಿನಯದ "ಡರ್" ಸಿನಿಮಾದ ರೀತಿಯಲ್ಲೇ ಈತನೂ ಏನಾದರೂ ಹುಚ್ಚುತನ ಪ್ರೀತಿಯನ್ನು ತೋರಿಸಬೇಕೆಂಬ ಅಭಿಲಾಷೆಯಲ್ಲಿ ಕಿಡ್ನಾಪ್ ಕೃತ್ಯ ಎಸಗುತ್ತಾನೆ. ಈ ಕೆಲಸಕ್ಕೆ ತನ್ನ ಸ್ನೇಹಿತರ ಬೆಂಬಲವನ್ನೂ ಪಡೆಯುತ್ತಾನೆ. ಆದರೆ, ದೀಪ್ತಿ ತನ್ನ ಮೇಲೆ ಕನಿಕರ ಹಾಗೂ ಪ್ರೀತಿ ತೋರಬಹುದೆಂಬ ಆಸೆ ಹಾಗೂ ನಿರೀಕ್ಷೆಯಲ್ಲಿ ಆತ ಈ ಕೆಲಸ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com