ವಿವಿಐಪಿ ಭದ್ರತಾ ಕರ್ತವ್ಯದಲ್ಲಿದ್ದ 600 ಕಮಾಂಡೋಗಳು ಉಗ್ರ ನಿಗ್ರಹ ತಂಡಕ್ಕೆ ನಿಯೋಜನೆ

ವಿವಿಐಪಿಗಳ ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದ್ದ 600 ಕಮಾಂಡೋಗಳನ್ನು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ವಾಪಸ್ ಕರೆಸಿಕೊಂಡಿದೆ...
ಕಮಾಂಡೋಗಳು
ಕಮಾಂಡೋಗಳು
ನವದೆಹಲಿ: ವಿವಿಐಪಿಗಳ ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದ್ದ  600 ಕಮಾಂಡೋಗಳನ್ನು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ವಾಪಸ್ ಕರೆಸಿಕೊಂಡಿದೆ.  ಉಗ್ರ ನಿಗ್ರಹಕ್ಕಾಗಿ ಹೆಚ್ಚಿನ ಯೋಧರು ಬೇಕಾಗಿದ್ದು, ಈ ಕಮಾಂಡೋಗಳನ್ನು ಪ್ರಸ್ತುತ ತಂಡಗಳಲ್ಲಿ ನಿಯೋಜಿಸಲಾಗುತ್ತಿದೆ.
ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರದಾಳಿ ನಡೆದಾಗ ಉಗ್ರರನ್ನು ಸದೆ ಬಡಿಯಲು ಕಮಾಂಡೋಗಳನ್ನು ಕರೆಯಲಾಗಿತ್ತು.
ಹೊಸ ಯೋಜನೆಯ ಪ್ರಕಾರ 11ನೇ ಸ್ಪೆಷಲ್ ರೇಂಜರ್ಸ್ ಗ್ರೂಪ್ (ಎಸ್‌ಆರ್‌ಜಿ)ಯ ಮೂರು ತಂಡಗಳಲ್ಲಿ ವಿವಿಐಪಿಗಳ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಎರಡು ತಂಡಗಳನ್ನು ಉಗ್ರ ನಿಗ್ರಹ ದಳಕ್ಕೆ ನಿಯೋಜಿಸಲಾಗಿದೆ. ಒಂದೊಂದು ಯೂನಿಟ್‌ನಲ್ಲಿ 300 ಕಮಾಂಡೋಗಳಿದ್ದು, ಒಟ್ಟು 600 ಕಮಾಂಡೋಗಳನ್ನು ಉಗ್ರ ನಿಗ್ರಹ ದಳಕ್ಕೆ ನಿಯೋಜನೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com