ಕನ್ನಡ ವಿಕಿಪೀಡಿಯಗೆ 13 ವರ್ಷ, 7 ಲಕ್ಷ ಬಳಕೆದಾರನ್ನು ಹೊಂದಿರುವ ಹರ್ಷ!

2004 ರ ಜುಲೈ ನಲ್ಲಿ ಆಪ್ ಲೋಡ್ ಅದ ಶಿವಮೊಗ್ಗ ಕುರಿತಾದ ಮಾಹಿತಿ ಕನ್ನಡದ ವಿಕಿಪೀಡಿಯದಲ್ಲಿ ಆಪ್ ಲೋಡ್ ಆದ ಮೊದಲ ಲೇಖನ...
ಕನ್ನಡ ವಿಕಿಪೀಡಿಯ
ಕನ್ನಡ ವಿಕಿಪೀಡಿಯ

ಬೆಂಗಳೂರು: 'ಕನ್ನಡ ವಿಕಿಪೀಡಿಯ', ಪ್ರಾದೇಶಿಕ ಭಾಷೆಯಲ್ಲಿ ಇಂಥಹದ್ದೊಂದು ಆಯ್ಕೆ ಕಳೆದ 13 ವರ್ಷಗಳಿಂದ ಅಸ್ತಿತ್ವದಲ್ಲಿದೆ, ಆದರೆ ವ್ಯಾಪಕವಾಗಿ ಬಳಕೆಯಾಗುತ್ತಿರುವುದು ಇತ್ತೀಚಿನ ವರ್ಷಗಳಿಂದ.
13 ವರ್ಷಗಳ ಹಿಂದೆ ಪ್ರಾರಂಭವಾದ ಕನ್ನಡ ವಿಕಿಪೀಡಿಯಗೆ ಇಂದು ತಿಂಗಳಿಗೆ ಬರೋಬ್ಬರಿ 7 ಲಕ್ಷಕ್ಕೂ ಹೆಚ್ಚು ವೀಕ್ಷಕರು ವಿವಿಧ ಮಾಹಿತಿಯನ್ನು ಅರಸಿ ಬರುತ್ತಾರೆ.  80 ಸಕ್ರಿಯ(ತಿಂಗಳಿಗೊಮ್ಮೆ 5 ಲೇಖನ) 8 ಹೆಚ್ಚು ಸಕ್ರಿಯ(ತಿಂಗಳಿಗೆ 100 ಲೇಖನಗಳನ್ನು) ಬರೆಯುವ ಸಂಪಾದಕರು ಹಾಗೂ ಬರಹಗಾರನ್ನೊಳಗೊಂಡಿದೆ.
ವಿವಿಧ ಸ್ತರಗಳ/ ವಯೋಮಾನದ, ವಿವಿಧ ವೃತ್ತಿಗಳಲ್ಲಿ ತೊಡಗಿರುವವರು ಕನ್ನಡ ವಿಕಿಪೀಡಿಯಗೆ ನಿರ್ವಾಹಕರಾಗಿ ಹಾಗೂ ವಿಷಯಗಳನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ. " ಕನ್ನಡ ವಿಕಿಪೀಡಿಯ ಪ್ರಾರಂಭವಾದ ಹೊಸತರಲ್ಲಿ ವಿಕಿಪಿಡಿಯಾದ ಕನ್ನಡ ಆವೃತ್ತಿ ಇದೆ ಎಂದೇ ಎಷ್ಟೋ ಜನರಿಗೆ ತಿಳಿದಿರಲಿಲ್ಲ, ಸಾಮಾಜಿಕ ಜಾಲತಾಣ  ಹಾಗೂ  ಕ್ರಿಯಾತ್ಮಕ ಕಾರ್ಯನಿರ್ವಹಣೆ ಮೂಲಕ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಿದೆ ಎನ್ನುತ್ತಾರೆ 2007 ರಿಂದ ಕನ್ನಡ ವಿಕಿಪಿಡಿಯಾ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಓಂ ಶಿವ ಪ್ರಕಾಶ್. 
2004 ರ ಜುಲೈ ನಲ್ಲಿ ಆಪ್ ಲೋಡ್ ಅದ  ಶಿವಮೊಗ್ಗ ಕುರಿತಾದ ಮಾಹಿತಿ ಕನ್ನಡದ ವಿಕಿಪೀಡಿಯದಲ್ಲಿ ಆಪ್ ಲೋಡ್ ಆದ ಮೊದಲ ಲೇಖನ, ಈಗ ಸರಿಸುಮಾರು 19 ,600 ಲೇಖನಗಳನ್ನು ಕನ್ನಡ ವಿಕಿಪೀಡಿಯ ಹೊಂದಿದೆ.  ಇಷ್ಟೆಲ್ಲಾ ಆದರೂ ಕನ್ನಡ ವಿಕಿಪಿಡಿಯಾವನ್ನು ಉತ್ತಮಗೊಳಿಸಲು ಹಲವು ಸವಾಲುಗಳಿವೆ ಎನ್ನುತ್ತಾರೆ ಶಿವ ಪ್ರಕಾಶ್, ಕನ್ನಡ ವಿಕಿಪೀಡಿಯ ಪುಟಗಳನ್ನು ನಿರ್ವಹಣೆ ಮಾಡಲು ವೇತನ ನೀಡಲಾಗುವುದಿಲ್ಲ, ಆದ್ದರಿಂದ ಜನರು ಕನ್ನಡ ವಿಕಿಪೀಡಿಯದಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಕನ್ನಡದ ಪ್ರಖ್ಯಾತ ಬರಹಗಾರರು ಲೇಖನಗಳನ್ನು/ ಮಾಹಿತಿಯನ್ನು ಒದಗಿಸಿದರೆ ಸಹಕಾರ ನೀಡಿದಂತಾಗುತ್ತದೆ ಎಂದು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ವಿಕಿಪಿಡಿಯಾಗೆ ಮಾಹಿತಿಗಳನ್ನು ಆಪ್ ಲೋಡ್ ಮಾಡಬೇಕಾದರೆ ನಂಬಲರ್ಹ ಮೂಲಗಳ ಕೊರತೆ ಎದುರಾಗುತ್ತದೆ. ಹೊಸ ಪುಟಗಳನ್ನು ಪ್ರಾರಂಭಿಸಲು ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಕನ್ನಡ ದಿನಪತ್ರಿಕೆಗಳು ಪುಟಗಳನ್ನು ಆನ್ ಲೈನ್ ನಲ್ಲಿ ಸರಿಯಾಗಿ ನಿರ್ವಹಿಸದೇ ಇರುವುದು ಹಳೆಯ ಮಾಹಿತಿಗಳನ್ನು ತೆಗೆದು ವಿಕಿಪೀಡಿಯಗೆ ಆಪ್ ಲೋಡ್ ಮಾಡಬೇಕಾದರೆ ಸಮಸ್ಯೆ ಉಂಟುಮಾಡುತ್ತದೆ. ಇಂಗ್ಲೀಶ್ ನ ವಿಕಿಪಿಡಿಯಾ ಗೆ ಹೋಲಿಸಿದರೆ ಕನ್ನಡ(ಪ್ರಾದೇಶಿಕ) ವಿಕಿಪೀಡಿಯದಲ್ಲಿ ಅನೇಕ ಸುಧಾರಣೆಗಳಾಗಬೇಕಿದೆ ಎಂಬುದು ವಿಕಿಪೀಡಿಯ ಪುಟಗಳನ್ನು ನಿರ್ವಹಿಸುತ್ತಿರುವವರ ಅಭಿಪ್ರಾಯಾವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com