ವಾಯುಸೇನೆಗೆ ಮೇಕ್ ಇನ್ ಇಂಡಿಯಾ ಭಾಗವಾಗಿ ನಿರ್ಮಾಣಗೊಂಡ ಫೈಟರ್ ಜೆಟ್: ಮನೋಹರ್ ಪರಿಕ್ಕರ್

ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ನಿರ್ಮಾಣಗೊಂಡ ಕನಿಷ್ಠ ಒಂದು ಫೈಟರ್ ಜೆಟ್ ನ್ನು ವಾಯುಸೇನೆಗೆ ಸೇರ್ಪಡೆಗೊಳಿಸುವ ಚಿಂತನೆ ನಡೆದಿದೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್

ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ನಿರ್ಮಾಣಗೊಂಡ ಕನಿಷ್ಠ ಒಂದು ಫೈಟರ್ ಜೆಟ್ ನ್ನು ವಾಯುಸೇನೆಗೆ ಸೇರ್ಪಡೆಗೊಳಿಸುವ ಚಿಂತನೆ ನಡೆದಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
"ವರ್ಷಾಂತ್ಯದ ವೇಳೆಗೆ ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿ ನಿರ್ಮಾಣಗೊಂಡಂತಹ ಒಂದು ಫೈಟರ್ ಜೆಟ್ ನ್ನು ವಾಯುಸೇನೆಗೆ ಆಯ್ಕೆ ಮಾಡಬೇಕೆಂಬ ಉದ್ದೇಶ ಇದೆ. ಆದರೆ ಒಂದಕ್ಕಿಂತ ಹೆಚ್ಚು ಫೈಟರ್ ಜೆಟ್ ಗಳನ್ನೂ ಆಯ್ಕೆ ಮಾಡಬಹುದು ಎಂದು  ಪರಿಕ್ಕರ್ ಹೇಳಿದ್ದಾರೆ.
ಮುಂದಿನ ಮೂರು ವರ್ಷಗಳಲ್ಲಿ ಕಾರ್ಯನಿರ್ವಹಣೆ ಮಾಡುವಂತಹ ಎರಡಕ್ಕಿಂತ ಹೆಚ್ಚು ಫೈಟರ್ ಜೆಟ್ ಘಟಕಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಖಾಸಗಿ ಕಂಪನಿಗಳು ವಾಯುಸೇನೆಗೆ ಫೈಟರ್ ಜೆಟ್ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಭಾಗವಾಗಿ ತಂತ್ರಜ್ಞಾನದ ವರ್ಗಾವಣೆ ಸಹಿತ ಭಾರತದಲ್ಲೇ ಫೈಟರ್ ಜೆಟ್ ಗಳನ್ನು ಉತ್ಪಾದನೆ ಮಾಡಲು  ಅಮೆರಿಕಾದ ಬೋಯಿಂಗ್ ಮತ್ತು ಲಾಕ್ಹೀಡ್ ಮಾರ್ಟಿನ್ ಸ್ವೀಡನ್ ನ ಸಾಬ್, ಫ್ರಾನ್ಸ್ ನ ಡಸ್ಸಾಲ್ಟ್ ಏವಿಯೇಷನ್ ಮತ್ತು ಯೂರೋಫೈಟರ್ ಕಂಪನಿಗಳು ಆಸಕ್ತಿ ತೋರಿದ್ದು ಘಟಕಗಳ ನಿರ್ಮಾಣದ ಸಹಭಾಗಿತ್ವಕ್ಕಾಗಿ ಸ್ಥಳೀಯ ಸಂಸ್ಥೆಗಳೊಂದಿಗೆ ಮಾತುಕೆತೆ ನಡೆಸಲು ಮುಂದಾಗಿವೆ. ಆದರೆ ಪಾಲುದಾರರನ್ನು ಅಂತಿಮಗೊಳಿಸುವ ಮುನ್ನ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ವಿದೇಶಿ ಕಂಪನಿಗಳು ಎದುರು ನೋಡುತ್ತಿವೆ ಎಂದು ಹೇಳಲಾಗಿದೆ.
36 ರೆಫೆಲ್ ಫೈಟರ್ ಜೆಟ್ ಗಳನ್ನು ಖರೀದಿಸುವುದಕ್ಕೆ ಭಾರತ ಸರ್ಕಾರ ಫ್ರಾನ್ಸ್ ನೊಂದಿಗೆ ನಡೆಸಿರುವ ಮಾತುಕೆತೆ ಅಂತಿಮ ಹಂತಕ್ಕೆ ಬಂದಿರುವಾಗಲೇ ಈ ಬೆಳವಣಿಗೆ ನಡೆದಿದೆ. ಇದರೊಂದಿಗೆ ಭಾರತ ದೇಶಿ ನಿರ್ಮಿತ ತೇಜಸ್ ಯುದ್ಧವಿಮಾನವನನ್ನೂ ಸೇನೆಗೆ ಸೇರ್ಪಡೆಗೊಳಿಸಲು ನಿರ್ಧರಿಸಿದೆ. ವಾಯು ಸೇನೆಗೆ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಪೂರೈಸಲು ಹೆಚ್ಎಎಲ್ ಪ್ರತಿ ವರ್ಷ 16 ತೇಜಸ್ ಯುದ್ಧ ವಿಮಾನಗಳನ್ನು ನಿರ್ಮಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com