ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಠ್ಯ ಪುಸ್ತಕದಲ್ಲಿ ವಿದೇಶಿ ಕವಿಗಳ ಕವನಗಳನ್ನು ಕಿತ್ತು ಹಾಕಿದ ರಾಜಸ್ತಾನದ ಬಿಜೆಪಿ ಸರ್ಕಾರ

ರಾಜಸ್ತಾನದ ಬಿಜೆಪಿ ಸರ್ಕಾರ ಎಂಟನೇ ತರಗತಿಯ ಪಠ್ಯ ಪುಸ್ತಕದಿಂದ ವಿದೇಶಿ ಕವಿಗಳ ಕವನಗಳನ್ನು ಕಿತ್ತು ಹಾಕಲು ತೀರ್ಮಾನಿಸಿದೆ. ಇನ್ಮುಂದೆ 8ನೇ ತರಗತಿಯ...
Published on
ನವದೆಹಲಿ: ರಾಜಸ್ತಾನದ ಬಿಜೆಪಿ ಸರ್ಕಾರ ಎಂಟನೇ ತರಗತಿಯ ಪಠ್ಯ ಪುಸ್ತಕದಿಂದ ವಿದೇಶಿ ಕವಿಗಳ ಕವನಗಳನ್ನು ಕಿತ್ತು ಹಾಕಲು ತೀರ್ಮಾನಿಸಿದೆ. ಇನ್ಮುಂದೆ 8ನೇ ತರಗತಿಯ ಪಠ್ಯದಲ್ಲಿ ಜಾನ್ ಕೀಟ್ಸ್‌ನ ಕಟಿ On The Grasshopper and Cricket, ಥಾಮಸ್ ಹಾರ್ಡಿ ಅವರ When I Set Out For Lyonnesse, ಟಿ. ಎಸ್  ಎಲಿಯಟ್ ಬರೆದ Macavity: The Mystery Cat, ಎಡ್ವಾರ್ಡ್ ಲಿಯರ್‌ನ  The Duck and the Kangaroo ಮತ್ತು ವಿಲಿಯಂ ಬ್ಲೇಕ್‌ನ  The School Boy. ಎಂಬ ಕವನಗಳು ಓದಲು ಸಿಗುವುದಿಲ್ಲ. ಈಗಲೇ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ, ಅದರಲ್ಲಿ ಪ್ರಾದೇಶಿಕ ಕವಿಗಳ ಕವನಗಳನ್ನು ಸೇರಿಸಲಾಗಿದೆ.
ಇದೀಗ ಅಜ್ಮೀರ್, ಉದಯ್‌ಪುರ್, ದೌಸಾ, ಭರತ್‌ಪುರ್ ಮತ್ತು ಜೈಪುರ್ ಡಿಪೋಗಳಿಗೆ ಬಂದಿರುವ ಪಠ್ಯಪುಸ್ತಕಗಳಲ್ಲಿ My First Visit To The Bank, The Brave Lady of Rajasthan, Chittor, Sangita The Brave Girl and The Glory of Rajasthan.ಎಂಬೀ ಕವನಗಳನ್ನು ಸೇರಿಸಲಾಗಿದೆ.
ಅದೇ ವೇಳೆ ಹಿಂದಿ ಪಠ್ಯ ಪುಸ್ತಕದಲ್ಲಿ ಉರ್ದು ಪದ ಬಳಕೆಯಾಗಿದ್ದ ಪಾಠವನ್ನೂ ತೆಗೆಯಲಾಗಿದೆ.
ಮಕ್ಕಳಿಗೆ ಉರ್ದು ಪದಗಳನ್ನು ಅರ್ಥ ಮಾಡುವುದು  ಕಷ್ಟ ಎಂದು ಹೇಳಿ ಉರ್ದು ಪದಗಳಿರುವ ಪಾಠವನ್ನು ತೆರೆಯಲಾಗಿದೆ ಎಂದು ಅಧಿಕೃತರು ಹೇಳಿರುವುದಾಗಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com