4 ಮಠಗಳ ಮಠಾಧಿಪತಿಯಾಗಿ ನಿತ್ಯಾನಂದ ಮುಂದುವರಿಕೆಗೆ ಹೈಕೋರ್ಟ್ ತಡೆ

ಬಿಡದಿ ಆಶ್ರಮದ ಸ್ವಯಂ ಘೋಷಿತ ದೇವಮಾನವ ಎಂದೇ ಖ್ಯಾತರಾದ, ಬಿಡದಿ ಆಶ್ರಮದ ನಿತ್ಯಾನಂದ, ತಮಿಳುನಾಡಿನ ತಿರುವರೂರ್...
ನಿತ್ಯಾನಂದ
ನಿತ್ಯಾನಂದ
ಚೆನ್ನೈ: ಬಿಡದಿ ಆಶ್ರಮದ ಸ್ವಯಂ ಘೋಷಿತ ದೇವಮಾನವ ಎಂದೇ ಖ್ಯಾತರಾದ, ಬಿಡದಿ ಆಶ್ರಮದ ನಿತ್ಯಾನಂದ, ತಮಿಳುನಾಡಿನ ತಿರುವರೂರ್ ಮತ್ತು ಅಸುಪಾಸಿನ ನಾಲ್ಕು ಮಠಗಳ ಮುಖ್ಯಸ್ಥರಾಗಿ ಮುಂದುವರಿಯುವುದಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. 
ತಿರುವರೂರ್ ನ ಸ್ವಾಮಿನಾಥ ಸ್ವಾಮಿ ದೇವಸ್ಥಾನ ಮತ್ತು ಮಠ, ಪಾಲಸ್ವಾಮಿ ಮತ್ತು ಶಂಕರಸ್ವಾಮಿ ಮಠ, ವೇದಾರಣ್ಯಂನ ಪೊ.ಕಾ.ಸಾಧುಗಳ್ ಮಠ, ಅರುಣಾಚಲ ಜ್ಞಾನದೇಸಿಕಾರ್ ಸ್ವಾಮಿಗಳ್ ಮಠಗಳ ಮಠಾಧಿಪತಿಯಾಗಿ ಮುಂದುವರಿಯದಂತೆ ಮದ್ರಾಸ್ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ನಾಲ್ಕು ಮಠಗಳ ಮುಖ್ಯಸ್ಥರಾಗಿ ನಿತ್ಯಾನಂದ ಅವರು ಮುಂದುವರಿಯದಂತೆ ನಿರ್ಬಂಧಿಸಲು ಮದ್ರಾಸ್ ಹೈಕೋರ್ಟ್ ನಲ್ಲಿ ನಾಲ್ಕು ಮಠಗಳ ಟ್ರಸ್ಟಿಯಾಗಿರುವ ಸ್ವಾಮಿ ಆತ್ಮಾನಂದ ಮತ್ತು ಸೇಲಂ ಮೂಲದ ಶಾರದಾನಿಕೇತನ್ ಸಮತಿ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ಶಿವಕುಮಾರ್ ಅವರು, ನಾಲ್ಕು ಮಠಗಳ ಮುಖ್ಯಸ್ಥರಾಗಿ ನಿತ್ಯಾನಂದ ಮುಂದವರಿಕೆಗೆ ತಡೆಯಾಜ್ಞೆ ನೀಡಿದ್ದಾರೆ. 
ಇದೇ ವೇಳೆ, ಈ ನಾಲ್ಕೂ ಮಠಗಳ ಆಸ್ತಿ ಕುರಿತಂತೆ ನಿತ್ಯಾನಂದ ಅವರು ನಾಗಪಟ್ಟಣಂ ಉಪಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೂ ತಡೆ ನೀಡಲಾಗಿದೆ. ನಿತ್ಯಾನಂದಗೆ ನೋಟೀಸ್ ಜಾರಿ ಮಾಡಿದ್ದು, ಮಾರ್ಚ್ 14ರೊಳಗೆ ನೋಟೀಸ್ ಉತ್ತರಿಸಬೇಕು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com