
ನಾಗ್ಪುರ: ಸದ್ಯದ ಪರಿಸ್ಥಿತಿಯಲ್ಲಿ ಬುಲೆಟ್ ರೈಲುಗಳ ಅವಶ್ಯಕತೆಯಿಲ್ಲ. ಅದರ ಬದಲಾಗಿ ಭಾರತೀಯ ರೈಲ್ವೆ ರೈಲುಗಳಲ್ಲಿ ಈಗಿರುವ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು ಎಂದು ದೆಹಲಿ ಮೆಟ್ರೋದ ಮಾಜಿ ಮುಖ್ಯಸ್ಥ ಡಾ.ಇ.ಶ್ರೀಧರನ್ ಹೇಳಿದ್ದಾರೆ.
ಬುಲೆಟ್ ರೈಲು ಸಂಚಾರ ಆರಂಭಿಸಲು ಇದು ಸರಿಯಾದ ಸಮಯವಲ್ಲ. ಆದರೆ ರೈಲುಗಳ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ. ವೇಗ, ಮೂಲ ಸೌಕರ್ಯ ಮತ್ತು ಪ್ರಯಾಣಿಕರ ಸುಗಮ ಸಂಚಾರ ಅಭಿವೃದ್ಧಿಯಾಗಬೇಕು ಎಂದು 'ಮೆಟ್ರೋ ಮ್ಯಾನ್' ಎಂದು ಕರೆಯಲ್ಪಡುವ ಡಾ.ಶ್ರೀಧರನ್ ಹೇಳಿದ್ದಾರೆ. ಇನ್ನು 8-10 ವರ್ಷ ಕಳೆದ ನಂತರ ಮೆಟ್ರೋ ರೈಲು ಬೇಕಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
98 ಸಾವಿರ ಕೋಟಿ ರೂಪಾಯಿ ಮೊತ್ತದ ಮುಂಬೈ-ಅಹಮದಾಬಾದ್ ನಡುವೆ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಸೋ ಅಬೆ ಸಹಿ ಹಾಕಿದ್ದರು. ಬುಲೆಟ್ ರೈಲು ನಿರ್ಮಾಣಕ್ಕೆ ಭಾರತ ಜಪಾನ್ ನ ಸಹಕಾರವನ್ನು ಕೋರಿದೆ. 505 ಕಿಲೋ ಮೀಟರ್ ಉದ್ದದ ಮುಂಬೈ-ಅಹಮದಾಬಾದ್ ನಡುವಿನ ದೂರವನ್ನು ಬುಲೆಟ್ ರೈಲು ಸಹಾಯದಿಂದ 3 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ.
Advertisement