ನವದೆಹಲಿ: ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ ಜಾರಿ ಮಾಡಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧದ 2002ರ ಹಿಟ್ ಅಂಡ್ ರನ್ ಪ್ರಕರಕ್ಕೆ ಸಂಬಂಧಿಸಿದಂತೆ ಬಾಂಬೇ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಸಲ್ಮಾನ್ ಖಾನ್ ಗೆ ನೋಟೀಸ್ ನೀಡಿದೆ.
ಕಳೆದ ಡಿಸೆಂಬರ್ 10ರಂದು ಮುಂಬೈ ಹೈಕೋರ್ಟ್ ನ ನ್ಯಾಯಾಮೂರ್ತಿ ಎ.ಆರ್. ಜೋಷಿ ಸಲ್ಮಾನ್ ಖಾನ್‌ರನ್ನು ಆರೋಪ ಮುಕ್ತಗೊಳಿಸಿ, ಪ್ರಕರಣದಿಂದ ಖುಲಾಸೆಗೊಳಿಸಿದ್ದರು. ಬಾಂಬೇ ಹೈಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ರಜಾಕಾಲೀನ ಮನವಿ(ಎಸ್‌ಎಲ್‌ಪಿ)ಸಲ್ಲಿಸಿತ್ತು.