ಮೋದಿ ಜನಪ್ರಿಯತೆ ಕಂಡು ಕಾಂಗ್ರೆಸ್ ನಾಯಕರು ಕನಸಲ್ಲೂ ಹೆದರುತ್ತಿದ್ದಾರೆ: ಶಿವರಾಜ್ ಸಿಂಗ್ ಚೌಹಾಣ್

ಹೆಚ್ಚುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆಯಿಂದಾಗಿ ಕಾಂಗ್ರೆಸ್ ಮುಖಂಡರು ರಾತ್ರಿ ಕನಸಲ್ಲೂ ಬೆವರುತ್ತಿದ್ದಾರೆ ಎಂದು ...
ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್
Updated on

ಮಧ್ಯಪ್ರದೇಶ:  ಹೆಚ್ಚುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆಯಿಂದಾಗಿ ಕಾಂಗ್ರೆಸ್ ಮುಖಂಡರು ರಾತ್ರಿ ಕನಸಲ್ಲೂ ಬೆವರುತ್ತಿದ್ದಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  ಲೇವಡಿ ಮಾಡಿದ್ದಾರೆ.

ಅಮೆರಿಕ, ಇಂಗ್ಲೆಂಡ್, ದುಬೈ ಮತ್ತು ಫ್ರಾನ್ಸ್ ದೇಶ ಸೇರಿದಂತೆ ಯಾವ ದೇಶಕ್ಕಾದರೂ ಹೋಗಿ ಅಲ್ಲಿ ನಿಮಗೆ ಮೋದಿ, ಮೋದಿ ಎಂಬ ಮಂತ್ರ ಜಪಿಸುವುದನ್ನು ಕಾಣುತ್ತೇವೆ. ಕಾಂಗ್ರೆಸ್ ಮುಖಂಡರಿಗೆ ಮೋದಿ ಹೊರತು ಬೇರೆ ಯಾರು ಕಾಣಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.

ಮಧ್ಯ ಪ್ರದೇಶದ ಗ್ರಾಮವೊಂದರಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯಾಜನೆ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರ ರಾಜ್ಯದ ರೈತರಿಗಾಗಿ 2 ಸಾವಿರ ಕೋಟಿ ರೂಪಾಯಿಗಳ ಬರಪೀಡಿತ ಪರಿಹಾರ ಅನುದಾನವನ್ನು ಘೋಷಿಸಿದೆ ಎಂದು ತಿಳಿಸಿದ್ದಾರೆ. ಹೊಸ ಬೆಳೆ ವಿಮೆ ಯೋಜನೆಯಂತೆ ಒಂದು ವೇಳೆ, ಒಬ್ಬನೇ ಒಬ್ಬ ರೈತನ ಬೆಳೆ ನಾಶವಾದರೂ ಆ ರೈತನಿಗೆ ಬೆಳೆ ವಿಮೆ ದೊರೆಯಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  ಘೋಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com