ಹಿಂಸೆಗೆ ತಿರುಗಿದ ಜಾಟ್ ಚಳುವಳಿ: ಪೊಲೀಸರ ಗುಂಡೇಟಿಗೆ ಓರ್ವ ಬಲಿ

ಜಾಟ್ ಸಮುದಾಯದ ಸದಸ್ಯರು ಕಳೆದ ಆರು ದಿನಗಳಿಂದ ಮೀಸಲಾತಿಗಾಗಿ ಆಗ್ರಹಿಸಿ ಹರಿಯಾಣದಲ್ಲಿ ನಡೆಸುತ್ತಿರುವ ಚಳವಳಿ ಹಿಂಸೆಗೆ ತಿರುಗಿದ್ದು...
ಜಾಟ್ ಸಮುದಾಯದಿಂದ ಪ್ರತಿಭಟನೆ(ಸಂಗ್ರಹ ಚಿತ್ರ)
ಜಾಟ್ ಸಮುದಾಯದಿಂದ ಪ್ರತಿಭಟನೆ(ಸಂಗ್ರಹ ಚಿತ್ರ)

ಚಂಡೀಗಢ/ರೋಹ್ತಕ್: ಜಾಟ್ ಸಮುದಾಯದ ಸದಸ್ಯರು ಕಳೆದ ಆರು ದಿನಗಳಿಂದ ಮೀಸಲಾತಿಗಾಗಿ ಆಗ್ರಹಿಸಿ ಹರಿಯಾಣದಲ್ಲಿ ನಡೆಸುತ್ತಿರುವ ಚಳವಳಿ ಹಿಂಸೆಗೆ ತಿರುಗಿದ್ದು, ಪೊಲೀಸರ ಗುಂಡೇಟಿಗೆ ಓರ್ವ ಬಲಿಯಾಗಿದ್ದಾರೆ.

ರೋಹ್ತಕ್​ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ಆವರಣದಲ್ಲಿ ಜಾಟ್ ಪ್ರತಿಭಟನಕಾರರು ಉಗ್ರಪ್ರತಿಭಟನೆ ನಡೆಸುತ್ತಿದ್ದು ಹರಿಯಾಣ ಸಚಿವ ಕ್ಯಾಪ್ಟನ್ ಅಭಿಮನ್ಯು ಮನೆಗೆ ಬೆಂಕಿ ಕೂಡಾ ಹಚ್ಚಿದ್ದಾರೆ. ಅಲ್ಲದೆ ರೋಹ್ತಕ್​ನಲ್ಲಿ ಪೊಲೀಸ್ ಇನ್​ಸ್ಪೆಕ್ಟರ್ ಜನರಲ್ ಕಚೇರಿ ಮೇಲೆ ಸುಮಾರು 5000 ಮಂದಿಯ ಗುಂಪು ಕಲ್ಲುಗಳನ್ನು ತೂರಿದ್ದಾರೆ. ಐಜಿಪಿ ಕಚೇರಿ ಗೇಟ್, ಪೊಲೀಸ್ ಜೀಪ್​ಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಗಳು ತಿಳಿಸಿವೆ.

ಉದ್ರಿಕ್ತ ಗುಂಪನ್ನು ಚದುರಿಸುವ ಸಲುವಾಗಿ ಐಜಿಪಿ ಕಚೇರಿಯ ಒಳಗಿನಿಂದ ಪೊಲೀಸರು ಗುಂಡು ಹಾರಿಸಿದ್ದು, ಪೊಲೀಸರ ಗುಂಡೇಟಿಗೆ ಓರ್ವ ಬಲಿಯಾಗಿ, ಇತರ 6 ಮಂದಿ ಗಾಯಗೊಂಡಿದ್ದಾರೆ.

ಜಾಟ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವ ಪ್ರಸ್ತಾಪವನ್ನು ಜಾಟ್ ಸಮುದಾಯ ತಿರಸ್ಕರಿಸಿತ್ತು. ಜಾಟ್ ಪ್ರತಿಭಟನೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಇಂಟರ್​ನೆಟ್ ಹಾಗೂ ಎಸ್​ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಪ್ರತಿಭಟನೆಯಿಂದಾಗಿ ರಸ್ತೆ ಮತ್ತು ರೈಲು ಸಂಚಾರವೂ ಅಸ್ತವ್ಯಸ್ತಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com