ಅಮಿತ್ ಶಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಲಿಲ್ಲ ಏಕೆ: ಲಾಲೂ ಪ್ರಶ್ನೆ

ಜವಹರ್ ಲಾಲ್ ನೆಹರೂ ವಿವಿ ಪ್ರಕರಣ ಸಂಬಂಧ ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ....
ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್
Updated on

ನವದೆಹಲಿ: ಜವಹರ್ ಲಾಲ್ ನೆಹರೂ ವಿವಿ ಪ್ರಕರಣ ಸಂಬಂಧ ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಜೆಎನ್ ಯು ವಿವಿ ವಿದ್ಯಾರ್ಥಿ  ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿರುವ ಕೇಂದ್ರ ಸರ್ಕಾರ ಯಾಕೆ ಅಮಿತ್ ಶಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬಿಹಾರ ವಿಧಾನ ಸಭೆ ಚುನಾವಣಾ ರ್ಯಾಲಿ ವೇಳೆ ಭಾಷಣ ಮಾಡುತ್ತಿದ್ದ ಅಮಿತ್ ಶಾ, ಬಿಹಾರ ಚುನಾವಣೆಯಲ್ಲಿ ಮಹಾ ಮೈತ್ರಿಕೂಟ ಗೆದ್ದರೇ ಪಾಕಿಸ್ತಾನದಲ್ಲಿ ಪಟಾಕಿ ಸಿಡಿಯುತ್ತದೆ ಎಂದು ಹೇಳಿದ್ದರು. ಇದು ಕೂಡ ರಾಷ್ಟ್ರ ವಿರೋಧಿ ಹೇಳಿಕೆಯಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿದ್ದಾರೆ. ಬಿಜೆಪಿ ಗೆ ದೇಶ ಪ್ರೇಮದ ಬಗ್ಗೆ ಪಾಠ ಕಲಿಸಲು ಬರುವುದಿಲ್ಲ ಎಂದು ಲಾಲೂ ಪ್ರಸಾದ್ ವ್ಯಂಗ್ಯವಾಡಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com