ನಿವೃತ್ತ ಸಿಬ್ಬಂದಿಗಳಿಗೆ ಕೌಶಲ್ಯ ತರಬೇತಿ: ಸ್ಕಿಲ್ ನೆಟ್ವರ್ಕ್ ನೊಂದಿಗೆ ರಕ್ಷಣಾ ಸಚಿವಾಲಯ ಒಪ್ಪಂದ

ಪ್ರಧಾನಿ ನರೇಂದ್ರ ಮೋದಿ ಅವರ ಸ್ಕಿಲ್ ಇಂಡಿಯಾ ಮಿಷನ್ ಯೋಜನೆಯಡಿ ರಕ್ಷಣಾ ಸಚಿವಾಲಯ, ಕೌಶಲ್ಯ ಅಭಿವೃದ್ಧಿ ಜಾಲ(ಎಸ್ ಡಿಎನ್) ಒಪ್ಪಂದಕ್ಕೆ ಸಹಿ ಹಾಕಿವೆ.
ರಕ್ಷಣಾ ಸಚಿವಾಲಯ
ರಕ್ಷಣಾ ಸಚಿವಾಲಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ಕಿಲ್ ಇಂಡಿಯಾ ಮಿಷನ್ ಯೋಜನೆಯಡಿ ರಕ್ಷಣಾ ಸಚಿವಾಲಯ, ಕೌಶಲ್ಯ ಅಭಿವೃದ್ಧಿ ಜಾಲ(ಎಸ್ ಡಿಎನ್) ಒಪ್ಪಂದಕ್ಕೆ ಸಹಿ ಹಾಕಿವೆ.
ರಕ್ಷಣಾ ಇಲಾಖೆಯಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ತಾಂತ್ರಿಕ ಹಾಗೂ ಕಾರ್ಯಕ್ರಮ ನಿರ್ವಹಣೆಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಹಾಗೂ ಸ್ಕಿಲ್ ಇಂಡಿಯಾ ಡೆವಲಪ್ಮೆಂಟ್ ನೆಟ್ವರ್ಕ್ ನಡುವೆ ಒಪ್ಪಂದ ನಡೆದಿದೆ. ರಕ್ಷಣಾ ಇಲಾಖೆಯಲ್ಲಿ ವಾರ್ಷಿಕ 60 ,000 ಸಿಬ್ಬಂದಿಗಳು ಕಿರಿಯ ವಯಸ್ಸಿನಲ್ಲಿಯೇ ನಿವೃತ್ತಿಯಾಗುತ್ತಾರೆ.  
ಒಂದೆರಡು ವರ್ಷಗಳಲ್ಲಿ ನಿವೃತ್ತಿಯಾಗಲಿರುವವರು ಆರ್ಥಿಕ ಸ್ವಾವಲಂಬಿಗಳಾಗುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಪುನರ್ವಸತಿ ನಿರ್ದೇಶನಾಲಯ ಕೌಶಲ್ಯ ತರಬೇತಿ ನೀಡುತ್ತದೆ. ನಿವೃತ್ತ ಸಿಬ್ಬಂದಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಪಡೆಯುವುದಕ್ಕೆ ರಕ್ಷಣಾ ಇಲಾಖೆ ಹಾಗೂ ಕೌಶಲ್ಯ ಅಭಿವೃದ್ಧಿ ಜಾಲನಡುವಿನ ಒಪ್ಪಂದ ಸಹಕಾರಿಯಾಗಲಿದೆ.   
ಕೌಶಲ್ಯ ಅಭಿವೃದ್ಧಿಗಾಗಿ ರಕ್ಷಣಾ ಇಲಾಖೆ ಕೈಗೊಂಡಿರುವ ಕ್ರಮ ಹಾಗೂ ಕಾರ್ಯಕ್ರಮ ನಿರ್ವಹಣೆಗೆ ಒಪ್ಪಂದ ಸಹಕಾರಿಯಾಗಲಿದ್ದು ಇದರಿಂದ ಕನಿಷ್ಠ  3,00,000 ನಿವೃತ್ತ  ಸಿಬ್ಬಂದಿಗಳಿಗೆ ಯೋಗ್ಯವಾದ ಉದ್ಯೋಗ ಸಿಗಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com