ದೆಹಲಿ-ಆಗ್ರಾ ಗೇಟ್​ವುನ್ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಸ್ವಾಗತಕ್ಕೆ ರೈಲು ಸಖಿಯರು

ಭಾರತದ ಮೊಟ್ಟ ಮೊದಲ ಅತಿ ವೇಗದ ದೆಹಲಿ-ಆಗ್ರಾ ಗೇಟ್​ವುನ್ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣಿಕರನ್ನು ಗಗನ ಸಖಿಯರು ಗುಲಾಬಿ ಹೂ ಹಿಡಿದು, ಸಂಪ್ರಾದಾಯಿಕ...
ರೈಲು ಸಖಿಯರು
ರೈಲು ಸಖಿಯರು

ನವದೆಹಲಿ: ಭಾರತದ ಮೊಟ್ಟ ಮೊದಲ ಅತಿ ವೇಗದ ದೆಹಲಿ-ಆಗ್ರಾ ಗೇಟ್​ವುನ್ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣಿಕರನ್ನು ಗಗನ ಸಖಿಯರು ಗುಲಾಬಿ ಹೂ ಹಿಡಿದು, ಸಂಪ್ರಾದಾಯಿಕ ಶೈಲಿಯಲ್ಲಿ ನಮಸ್ಕರಿಸಿ ಸ್ವಾಗತಿಸಲಿದ್ದಾರೆ.

ಮುಂದಿನ ತಿಂಗಳಿನಲ್ಲಿ ತನ್ನ ಪ್ರಯಾಣ ಆರಂಭಿಸಲಿರುವ ದೆಹಲಿ-ಆಗ್ರಾ ಗೇಟ್​ವುನ್ ಎಕ್ಸ್​ಪ್ರೆಸ್ ರೈಲಿನಲ್ಲಿ ವಿಮಾನದಲ್ಲಿ ಗಗನಸಖಿಯರಿರುವಂತೆ ಇನ್ನು ಮುಂದೆ ರೈಲ್ವೆಯಲ್ಲಿಯೂ ಸಖಿಯರು ನಿಮ್ಮ ಸೇವೆಗೆ ಧಾವಿಸಲಿದ್ದಾರೆ. ದೆಹಲಿ-ಆಗ್ರಾ ಗೇಟ್​ವುನ್ ಎಕ್ಸ್​ಪ್ರೆಸ್ ಅತ್ಯಧಿಕ ಶಕ್ತಿಯ ತುರ್ತು ಬ್ರೇಕಿಂಗ್ ಸಿಸ್ಟಮ್ ಸ್ವಯಂ ಚಾಲಿತ ಅಗ್ನಿದುರಂತ ಎಚ್ಚರಿಕೆ ಗಂಟೆ, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಟಿವಿ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳು ಇಲ್ಲಿವೆ.

ರೈಲ್ವೆ ಮೂಲಗಳ ಪ್ರಕಾರ ಶತಾಬ್ದಿ ಎಕ್ಸಪ್ರೆಸ್ ರೈಲಿಗಿಂತ ಶೇ 25ರಷ್ಟು ತುಟ್ಟಿಯಾಗಿದೆ. ಆದರೆ ಗೇಟ್​ವುನ್ ಎಕ್ಸ್​ಪ್ರೆಸ್ ಪ್ರಯಾಣಿಕರು ನೀಡಿದ ಹಣಕ್ಕೆ ಒಳ್ಳೆಯ ಗುಣಮಟ್ಟದ ಸೇವೆ ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com