ನವದೆಹಲಿ: ದೇಶ ದ್ರೋಹದ ಆರೋಪ ಎದುರಿಸುತ್ತಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಾವು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಲು ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು ಹೇಳಿದ್ದಾರೆ.
ಉಮರ್ ಖಾಲಿದ್ ಸೇರಿದಂತೆ ದೇಶದ್ರೋಹದ ಆರೋಪಕ್ಕೆ ಗುರಿಯಾಗಿ ಭೂಗತರಾಗಿದ್ದ ಐವರು ಜೆಎನ್‌ಯು ವಿದ್ಯಾರ್ಥಿಗಳು ನಿನ್ನೆ ತಡ ರಾತ್ರಿ ವಿವಿ ಆವರಣದಲ್ಲಿ ಪ್ರತ್ಯಕ್ಷರಾಗಿದ್ದು, ನಾವು ಪೊಲೀಸರಿಗೆ ಶರಣಾಗುವುದಿಲ್ಲ ; ಬೇಕಿದ್ದರೆ ಪೊಲೀಸರು ನಮ್ಮನ್ನು ಬಂಧಿಸಿ ಒಯ್ಯಲಿ ಎಂದು ಹೇಳಿದ್ದಾರೆ.
ಈ ಮಧ್ಯೆ ವಿವಿ ಆವರಣಕ್ಕೆ ಪೊಲೀಸರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದ್ದು, ಗೇಟ್ ಬಳಿ ಶರಣಾಗುವಂತೆ ಪೊಲೀಸರು ವಿದ್ಯಾರ್ಥಿಗಳು ಸೂಚಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತರು, ಅವರು ತನಿಖೆಗೆ ಸಹಕರಿಸಬೇಕು. ಒಂದು ವೇಳೆ ಅವರು ನಿಜಕ್ಕೂ ಅಮಾಯಕರಾಗಿದ್ದರೆ, ಆ ಬಗ್ಗೆ ಸಾಕ್ಷ್ಯಗಳನ್ನು ಒದಗಿಸಲಿ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ನಿನ್ನೆ ರಾತ್ರಿ ಪತ್ಯಕ್ಷವಾಗಿರುವ ದೇಶದ್ರೋಹಗ ಆರೋಪ ಎದುರಿಸುತ್ತಿರುವ ಐವರು ವಿದ್ಯಾರ್ಥಿಗಳನ್ನು ಬಂಧಿಸಲು, ವಿವಿ ಆವರಣ ಪ್ರವೇಶಕ್ಕೆ ಅನುಮತಿ ನೀಡುವಂತೆ ಪೊಲೀಸರು ವಿವಿ ಆಡಳಿತ ಮಂಡಳಿಯನ್ನು ಕೋರಿದ್ದಾರೆ ಎನ್ನಲಾಗಿದೆ.