
ಅಲವಾರ್: ವಿವಾದದ ಕೇಂದ್ರಬಿಂದುವಾಗಿ ಮಾರ್ಪಟ್ಟಿರುವ ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪ್ರತಿದಿನ 3 ಸಾವಿರ ಬಳಕೆಯಾದ ಕಾಂಡೋಮ್‌ಗಳು ಹಾಗೂ 500 ಗರ್ಭ ನಿರೋಧಕ ಇಂಜೆಕ್ಷನ್‌ಗಳು, 10 ಸಾವಿರ ಸಿಗರೇಟ್ ತುಂಡುಗಳು ಪತ್ತೆಯಾಗುತ್ತವೆ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಆರೋಪಿದ್ದಾರೆ.
ಅಲವಾರ್‌ನಲ್ಲಿ ಮಾತನಾಡಿದ ಅವರು ಜೆಎನ್‌ಯುನಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೆತ್ತಲೆ ನೃತ್ಯ ಮಾಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕ್ಯಾಂಪಸ್‌ನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ದೇಶದ್ರೋಹಿ ಆರೋಪಿಗಳನ್ನು ಬೆಂಬಲಿಸುವವರು ಈ ದೇಶದಲ್ಲಿ ವಾಸಿಸಲು ಯೋಗರಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಶಾಸಕ ಜ್ಞಾನದೇವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement