ಜೆಎನ್ ಯು ವಿವಾದ: ಕನ್ಹಯ್ಯ ದೇಶ ವಿರೋಧಿ ಘೋಷಣೆ ಸಾಬೀತುಪಡಿಸುವಲ್ಲಿ ಪೊಲೀಸರು ವಿಫಲ

ದೇಶ ದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ...
ಕನ್ಹಯ್ಯ ಬಂಧನ ವಿರೋಧಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು(ಸಂಗ್ರಹ ಚಿತ್ರ)
ಕನ್ಹಯ್ಯ ಬಂಧನ ವಿರೋಧಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು(ಸಂಗ್ರಹ ಚಿತ್ರ)
ನವದೆಹಲಿ: ದೇಶ ದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿದ್ದನ್ನು ಸಾಬೀತುಪಡಿಸುವಲ್ಲಿ ದೆಹಲಿ ಪೊಲೀಸ್ ತನಿಖಾ ವರದಿ ವಿಫಲವಾಗಿದೆ.
ಜೆಎನ್ ಯು ದೇಶ ವಿರೋಧ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರತ್ಯಕ್ಷದರ್ಶಿಗಳು, ಸ್ಥಳದಲ್ಲಿದ್ದ ಪೊಲೀಸರು ಹಾಗೂ ಜೆಎನ್ ಯು ಸಿಬ್ಬಂದಿ ಸೇರಿದಂತೆ ಇದುವರೆಗೆ ಸಂಗ್ರಹಿಸಿದ ಸಾಕ್ಷ್ಯಗಳು ದೇಶ ವಿರೋಧಿ ಘೋಷಣೆ ಸಾಭೀತುಪಡಿಸುವಲ್ಲಿ ವಿಫಲವಾಗಿವೆ ಎಂದು ವರದಿ ಹೇಳಿದೆ.
ಜೆಎನ್ ಯುನಲ್ಲಿ ಫೆಬ್ರುವರಿ 9ರಂದು ನಡೆದ ಘಟನೆ ಬಗ್ಗೆ ಡಿಸಿಪಿ ನೇತೃತ್ವದ ತನಿಖಾ ತಂಡ ತಯಾರಿಸಿರುವ ವರದಿಯು ವಿದ್ಯಾರ್ಥಿಗಳು ಭಾರತ ವಿರೋಧಿ ಘೋಷಣೆ ಹಾಗೂ ಪ್ರಚೋದಕ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆಪಾದಿಸಿದೆ. ಆದರೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಬಗ್ಗೆ ಪ್ರಸ್ತಾಪವಿಲ್ಲ ಎಂದು ಹೇಳಿದೆ.
ಕನ್ಹಯ್ಯ ಕುಮಾರ್ ಸೇರದಿಂತೆ ಎಂಟು ವಿದ್ಯಾರ್ಥಿಗಳು ಅಸಂವಿಧಾನಿ ಘೋಷಣೆ ಕೂಗಿದ್ದಾರೆ ಎಂದು ಜೆಎನ್ ಯು ಆಂತರಿಕ ತನಿಖಾ ವರದಿ ಹೇಳಿರುವುದಾಗಿ ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.
ಸುದ್ದಿ ವಾಹಿನಿಯ ವಿಡಿಯೋ ಆಧರಿಸಿ ಕನ್ಹಯ್ಯ ಸೇರಿದಂತೆ ಎಂಟು ವಿದ್ಯಾರ್ಥಿಗಳ ವಿರುದ್ಧ ರಾಷ್ಟ್ರದ್ರೋಹ ಆರೋಪ ಹೊರಿಸಿಲಾಗಿದೆ. ಆದರೆ ಭಾನುವಾರ ದೆಹಲಿ ಪೊಲೀಸ್ ಆಯುಕ್ತರ ಕಚೇರಿಗೆ ಪೊಲೀಸರು ಸಲ್ಲಿಸರುವ ತನಿಖಾ ವರದಿಯು ಸುದ್ದಿವಾಹಿನಿಯ ವಿಡಿಯೋ ದೃಶ್ಯಕ್ಕೆ ೕಲಿಕೆಯಾಗುತ್ತಿಲ್ಲ. ಹೀಗಾಗಿ ರಾಷ್ಟ್ರದ್ರೋಹ ಪ್ರಕರಣ ಬಿದ್ದು ಹೋಗಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪೊಲೀಸರು ತಮ್ಮ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್​ಐಆರ್) ಜೆಎನ್​ಯುು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಇತರರ ವಿರುದ್ಧ ಭಾರತ ವಿರೋಧಿ ಘೋಷಣೆ  ಮತ್ತು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ  ಕೂಗಿದ್ದುದಾಗಿ ಆಪಾದಿಸಿದ್ದರು. ಘಟನೆಯ ಮರುದಿನ ಫೆಬ್ರುವರಿ 10ರಂದು ಝೀ ನ್ಯೂಸ್ ಪ್ರಸಾರ ಮಾಡಿದ್ದ ಸುದ್ದಿಯ ವಿಡಿಯೋದಲ್ಲಿ ಈ ವಿಚಾರ ಪ್ರಸಾರಗೊಂಡ ಬಳಿಕ ಪೊಲೀಸರು ಈ ಎಫ್​ಐಆರ್ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com