ಬರಗಾಲದಿಂದ ಕಂಗೆಟ್ಟ ರೈತನಿಗೆ ಸಂತಸ: ಈ ಬಾರಿ ಉತ್ತಮ ಮಳೆ ನಿರೀಕ್ಷೆ

ಎರಡು ವರ್ಷಗಳ ಸತತ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಇದು ಸಂತೋಷದ ಸುದ್ದಿ. ಎರಡು ವರ್ಷಗಳ ಭೀಕರ ಬರಗಾಲಕ್ಕೆ ಕಾರಣವಾಗಿರುವ ಎಲ್ ನಿನೊ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎರಡು ವರ್ಷಗಳ ಸತತ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಇದು ಸಂತೋಷದ ಸುದ್ದಿ. ಎರಡು ವರ್ಷಗಳ ಭೀಕರ ಬರಗಾಲಕ್ಕೆ ಕಾರಣವಾಗಿರುವ ಎಲ್ ನಿನೊ ಈ ಬಾರಿ ದೇಶಾದ್ಯಂತ ಉತ್ತಮ ಮಳೆ ಸುರಿಸಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಮುಂಗಾರಿನ ಬಗ್ಗೆ ನಿಖರವಾಗಿ ಅಂದಾಜು ಮಾಡಲು ಈಗ ಸಾಧ್ಯವಿಲ್ಲ. ಆದರೆ ಎರಡು ವರ್ಷಗಳಿಗಿಂತ ಅಧಿಕ ಮಳೆ ಈ ಬಾರಿಯ ಮುಂಗಾರಿನಲ್ಲಿ ಬೀಳಲಿದೆ ಎಂದು ತಜ್ಞರು ಹೇಳಿದ್ದಾರೆ.

ಕಳೆದ ವರ್ಷ ಮುಂಗಾರು ದುರ್ಬಲಗೊಳಿಸಿದ ಎಲ್ ನಿನೊ ಇದೀಗ ದುರ್ಬಲವಾಗುತ್ತಿದೆ.  ಮುಂಗಾರು ಮಧ್ಯದ ವೇಳೆಗೆ  ಇದರ ಪರಿಣಾಣ ತಟಸ್ಥವಾಗುವ ನಿರೀಕ್ಷೆ ಇದೆ. ಇದಕ್ಕೆ ಪರ್ಯಾಯವಾಗಿ ಎಲ್  ನಿನೊ ಗೆ ವಿರುದ್ಧವಾದ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆಯಿದೆ. ಇದು ಮುಂಗಾರಿಗೆ ಪೂರಕವಾಗಿದ್ದು, ಮಳೆಗಾಲ ಮುಗಿಯುವ ಮುನ್ನ ಈ ಪರಿಸ್ಥಿತಿ  ಅಭಿವೃದ್ಧಿಯಾಗಬಹುದು ಎಂದು ಮುಂಗಾರು ತಜ್ಞರ ಅಭಿಪ್ರಾಯವಾಗಿದೆ.

ಎಲ್ ನಿನೋ ಇಂದ  ಭಾರತದಲ್ಲಿ ಮಳೆ ಕಡಿಮೆಯಾಗಿದೆ.  ಇದೀಗ ಫೆಸಿಫಿಕ್ ಪ್ರದೇಶದಲ್ಲಿ ಉಷ್ಣತೆ ಕಡಿಮೆಯಾಗುತ್ತಿದ್ದು ಮಳೆಗಾಲದ ಮಧ್ಯದ ವೇಳೆಗೆ ಯಥಾಸ್ಥಿತಿಗೆ ಬರಲಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com