
ನವದೆಹಲಿ: ಅಫ್ಜಲ್ ಗುರು ಹುತಾತ್ಮನಾ? ಹೀಗೆಂದು ಪ್ರಶ್ನಿಸಿದ್ದು ಬಿಜೆಪಿ ನಾಯಕ ಅನುರಾಗ್ ಠಾಕೂರ್. ಲೋಕಸಭೆಯಲ್ಲಿ ಜೆಎನ್ ಯು ವಿವಾದದ ಬಗ್ಗೆ ಮಾತನಾಡಿದ ಅವರು, ಉಗ್ರ ಅಫ್ಜಲ್ ಗುರು ನನ್ನು ಹುತಾತ್ಮ ಎಂದು ಬಣ್ಣಿಸಲು ಹೊರಟಿರುವವರೊಂದಿಗೆ ಕಾಂಗ್ರೆಸ್ ಗುರುತಿಸಿಕೊಳ್ಳುತ್ತಿದೆ ಎಂದು ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.
" ಸಂಸತ್ ಮೇಲೆ ದಾಳಿ ಮಾಡಿದವರನ್ನು ಬೆಂಬಲಿಸುತ್ತೀರೋ ಅಥವಾ ಸಂಸತ್ ನ್ನು ರಕ್ಷಿಸುವವರನ್ನು ಬೆಂಬಲಿಸುತ್ತೀರೋ ಎಂಬುದನ್ನು ನೀವು ನಿರ್ಧರಿಸಬೇಕಿದೆ" ಎಂದಿರುವ ಅನುರಾಗ್ ಠಾಕೂರ್, ಇತ್ತೀಚೆಗಷ್ಟೇ ಹುತಾತ್ಮರಾದ ಕ್ಯಾಪ್ಟನ್ ಪವನ್ ಕುಮಾರ್, ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರನ್ನು ಸ್ಮರಿಸುತ್ತ ಬಿಜೆಪಿ ದೇಶವನ್ನು ರಕ್ಷಿಸುವ ಯೋಧರ ಪರವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅಫ್ಜಲ್ ಗುರು ನನ್ನು ಹುತಾತ್ಮ ಎಂದು ಹೇಳುವವರೊಂದಿಗೆ ಗುರುತಿಸಿಕೊಳ್ಳುತ್ತಾರೆ. ಅವರಿಗೆ ಕುಟುಂಬ ಮೊದಲು ದೇಶ ನಂತರ, ಆದರೆ ನಮಗೆ ದೇಶವೇ ಮೊದಲು ಎಂದು ಠಾಕೂರ್ ಹೇಳಿದ್ದಾರೆ.
Advertisement