ಕನ್ಹಯ್ಯ ಕುಮಾರ್, ಪತ್ರಕರ್ತರನ್ನು ಥಳಿಸಿದ್ದ ವಕೀಲ ಶೀಘ್ರವೇ ಶರಣಾಗತಿ ಸಾಧ್ಯತೆ

ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ಗೆ ಥಳಿಸಿದ್ದ ವಕೀಲ ವಿಕ್ರಮ್ ಚೌಹಾಣ್ ಶೀಘ್ರವೆ ಪೊಲೀಸರಿಗೆ ಶರಣಾಗುವ ಸಾಧ್ಯತೆ ಇದೆ.
ವಕೀಲ ವಿಕ್ರಮ್ ಚೌಹಾಣ್
ವಕೀಲ ವಿಕ್ರಮ್ ಚೌಹಾಣ್

ನವದೆಹಲಿ: ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಪತ್ರಕರ್ತರು ಹಾಗೂ ವಿವಿ ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ಗೆ ಥಳಿಸಿದ್ದ ವಕೀಲ ವಿಕ್ರಮ್ ಚೌಹಾಣ್ ಶೀಘ್ರವೆ ಪೊಲೀಸರಿಗೆ ಶರಣಾಗುವ ಸಾಧ್ಯತೆ ಇದೆ.

ಇಂಡಿಯಾ ಟುಡೆ ವರದಿ ಪ್ರಕಾರ ತನಿಖೆಗಾಗಿ ತಿಲಕ್ ಮಾರ್ಗ್ ಪೊಲೀಸ್ ಠಾಣೆ ಪೊಲೀಸರೆದುರು ಹಾಜರಾಗಿದ್ದ ವಿಕ್ರಮ್ ಚೌಹಾಣ್ ಶೀಘ್ರವೆ ಪೊಲೀಸರಿಗೆ ಶರಣಾಗಲಿದ್ದಾರೆ ಎಂದು ತಿಳಿದುಬಂದಿದೆ. ಇಂಡಿಯಾ ಟುದೇ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ತಾನು ರಾಷ್ಟ್ರವಿರೋಧಿ ಘೋಷಣೆ ಕೂಗಿದ್ದಾರೆನ್ನಲಾದ ವಿದ್ಯಾರ್ಥಿಗಳಿಗೆ ಥಳಿಸಿರುವುದನ್ನು ವಕೀಲ ವಿಕ್ರಮ್ ಚೌಹಾಣ್ ಒಪ್ಪಿಕೊಂಡಿದ್ದರು. ವಿಕ್ರಮ್ ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ದಾಖಲಾಗಿದ್ದು, ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿದೆ.  ವಿದ್ಯಾರ್ಥಿಗಳಿಗೆ ಥಳಿಸಿದ್ದ ಮತ್ತೋರ್ವ ವಕೀಲ ಯಶ್ ಪಾಲ್ ಸಿಂಗ್ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com