ಜೆಎನ್ ಯು ವಿವಾದ: ಪ್ರಶಸ್ತಿ ವಾಪಸ್ ನೀಡಲಿರುವ ನಿವೃತ್ತ ಪ್ರಾಧ್ಯಾಪಕ ಚಮನ್ ಲಾಲ್

ಜೆಎನ್ ಯು ನಿವೃತ್ತ ಪ್ರಾಧ್ಯಾಪಕ ಚಮನ್ ಲಾಲ್ ಈಗ ಮಾನವ ಸಂಪನ್ಮೂಲ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮತ್ತೊಂದು ಪ್ರಶಸ್ತಿಯನ್ನು ಇಲಾಖೆಗೆ ವಾಪಸ್ ನೀಡಲು ನಿರ್ಧರಿಸಿದ್ದಾರೆ.
ನಿವೃತ್ತ ಪ್ರಾಧ್ಯಾಪಕ  ಚಮನ್ ಲಾಲ್
ನಿವೃತ್ತ ಪ್ರಾಧ್ಯಾಪಕ ಚಮನ್ ಲಾಲ್
Updated on

ನವದೆಹಲಿ: ಅಸಹಿಷ್ಣುತೆಯನ್ನು ವಿರೋಧಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ ನೀಡಿದ್ದ ಜೆಎನ್ ಯು ನಿವೃತ್ತ ಪ್ರಾಧ್ಯಾಪಕ ಚಮನ್ ಲಾಲ್ ಈಗ ಮಾನವ ಸಂಪನ್ಮೂಲ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮತ್ತೊಂದು ಪ್ರಶಸ್ತಿಯನ್ನು ಇಲಾಖೆಗೆ ವಾಪಸ್ ನೀಡಲು ನಿರ್ಧರಿಸಿದ್ದಾರೆ.
ಜೆಎನ್ ಯು ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ಹಾಗೂ ಜೆಎನ್ ಯು ಸಿಬ್ಬಂದಿಗಳನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಿರುವ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಹಾಗೂ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲು ಪ್ರಶಸ್ತಿ ವಾಪಸ್ ನೀಡುತ್ತಿರುವುದಾಗಿ ಚಮನ್ ಲಾಲ್ ತಿಳಿಸಿದ್ದಾರೆ. ಹಿಂದಿ ನಿರ್ದೇಶನಾಲಯದಿಂದ ಕೊದಮಾಡಲಾಗಿದ್ದ ಪ್ರಶಸ್ತಿ ಫಲಕ ಹಾಗೂ 50,000 ರೂಪಾಯಿಯನ್ನೊಳಗೊಂಡ ಪ್ರಶಸ್ತಿಯನ್ನು ವಾಪಸ್ ನೀಡಲು ತೀರ್ಮಾನಿಸಿದ್ದೇನೆ ಎಂದು ಜೆಎನ್ ಯು ವಿವಿ ಕುಲಪತಿಗೆ ಜಗದೀಶ್ ಕುಮಾರ್ ಪತ್ರ ಬರೆದಿದ್ದಾರೆ.    
ಕಳೆದ ವರ್ಷ ಅಸಹಿಷ್ಣುತೆ ವಿರುದ್ಧ ಧ್ವನಿ ಎತ್ತಿ ಪ್ರಶಸ್ತಿ ವಾಪಸ್ ಚಳುವಳಿಯಲ್ಲಿ ಭಾಗಿಯಾಗಿದ್ದ ಚಮನ್ ಲಾಲ್ ಈಗ ಮಾನವ ಸಂಪನ್ಮೂಲ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪ್ರಶಸ್ತಿಯನ್ನು ವಾಪಸ್ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com