
ಹೈದರಾಬಾದ್: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈದರಾಬಾದ್ ವಿವಿ ಯ ಎಸ್ ಸಿ / ಎಸ್ ಟಿ ಶಿಕ್ಷಕರ ವೇದಿಕೆ ಹಾಗೂ ಪ್ರಾಧ್ಯಾಪಕರು ಸ್ಮೃತಿ ಇರಾನಿ ರೋಹಿತ್ ವೇಮುಲಾ ಕುಟುಂಬದ ಬಗ್ಗೆ ಸಂವೇದನೆ ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿಯಿಂದ ನ್ಯಾಯ ಹಾಗೂ ಸತ್ಯವನ್ನು ನಿರೀಕ್ಷಿಸುತ್ತಿದ್ದೇವೆ ಹೊರತು ಭಾವಾತಿರೇಕದ ವರ್ತನೆಯನ್ನಲ್ಲ. ಪ್ರಾಧ್ಯಾಪಕರು ಹಾಗೂ ಸಚಿವರು ಸತ್ಯ, ಸಮಾನತೆ, ನ್ಯಾಯ, ಭರವಸೆ, ಮತ್ತು ಸ್ಫೂರ್ತಿಯನ್ನು ನೀಡಬೇಕೆ ಹೊರತು ಭಾವಾತಿರೇಕದ ವರ್ತನೆ ತೋರುವುದು ಸರಿಯಲ್ಲ ಎಂದು ಶಿಕ್ಷಕರ ವೇದಿಕೆ ಸ್ಮೃತಿ ಇರಾನಿಗೆ ಬರೆದ ಪತ್ರದಲ್ಲಿ ಹೇಳಿದೆ.
ವೇಮುಲ ಪ್ರಕರಣದಲ್ಲಿ ಸ್ಮೃತಿ ಇರಾನಿ ನಿರ್ದೋಷಿಯೆಂದು ಹೇಳಿರುವ ಶಿಕ್ಷಕರ ವೇದಿಕೆ, ಸಂಸತ್ ನ ಭಾಷಣದಲ್ಲಿ ತಪ್ಪು ಮಾಹಿತಿಗಳನ್ನು ಸಮರ್ಥನೆ ಮಾಡಿದ್ದಾರೆ ಎಂದು ಸ್ಮೃತಿ ಇರಾನಿ ವಿರುದ್ಧ ಆರೋಪಿಸಿದೆ. ಭಾಷಣದಲ್ಲಿ ತಪ್ಪು ಮಾಹಿತಿಗಳನ್ನು ಸಮರ್ಥಿಸುವುದು ಮಾತ್ರವಲ್ಲದೇ ಸ್ಮೃತಿ ಇರಾನಿ ಅವರು ಮುಲಾ ಕುಟುಂಬದ ಬಗ್ಗೆ ಸಂವೇದನೆ ಇಲ್ಲದಂತೆ ನಡೆದುಕೊಂಡಿದ್ದಾರೆ ಎಂದು ಎಸ್ ಸಿ / ಎಸ್ ಟಿ ಶಿಕ್ಷಕರ ವೇದಿಕೆ ಪತ್ರದಲ್ಲಿ ತಿಳಿಸಿದೆ.
Advertisement