ನವದೆಹಲಿ: ಮಹಿಳಾ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವಿಜ್ಞಾನಿ ಆರ್.ಕೆ ಪಚೌರಿ ವಿರುದ್ಧ ದೆಹಲಿ ಪೊಲೀಸರು ಸೋಮವಾರ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ (ಟೆರಿ)ಯ ಪ್ರಧಾನ ನಿರ್ದೇಶಕ ಆರ್ ಕೆ ಪಚೌರಿ ವಿರುದ್ಧ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ದೂರು ಸಲ್ಲಿಸಿದ್ದರು.
ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ರಾಜೇಂದ್ರ ಕೆ. ಪಚೌರಿ ಜಾಗತಿಕ ತಾಪಮಾನದ ಅಂತರದೇಶೀಯ ಸಮಿತಿಯ(ಐಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು.
ಸೆಕ್ಷನ್ 354ಎ ಮತ್ತು 354 ಡಿ ಅಡಿಯಲ್ಲಿ ಲೈಂಗಿಕ ಕಿರುಕುಳ ಆರೋಪ ಹಾಗೂ ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಬೆದರಿಕೆ ಅಪರಾಧದ ಆರೋಪಗಳಲ್ಲಿ ಫೆ.13ರಂದು ಪಚೌರಿ ಅವರು ವಿರುದ್ಧ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.