ಕೇಂದ್ರ ಸಚಿವೆಗೆ ಬರೆದ ಪತ್ರದಲ್ಲಿ ರೋಹಿತ್ ಹೆಸರು ಪ್ರಸ್ತಾಪಿಸಿಲ್ಲ: ದತ್ತಾತ್ರೇಯ

ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆ ಸ್ಮೃತಿ ಇರಾನಿಗೆ ಬರೆದ ಪತ್ರದಲ್ಲಿ ರೋಹಿತ್ ಹೆಸರು ಪ್ರಸ್ತಾಪಿಸಿಲ್ಲ ಎಂದು ಕೇಂದ್ರ...
ಬಂಡಾರು ದತ್ತಾತ್ರೇಯ
ಬಂಡಾರು ದತ್ತಾತ್ರೇಯ
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆ ಸ್ಮೃತಿ ಇರಾನಿಗೆ ಬರೆದ ಪತ್ರದಲ್ಲಿ ರೋಹಿತ್ ಹೆಸರು ಪ್ರಸ್ತಾಪಿಸಿಲ್ಲ ಎಂದು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಸ್ಪಷ್ಟನೇ ನೀಡಿದ್ದಾರೆ. 
ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹಾಗೂ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರ ಅನಗತ್ಯ ಹಸ್ತಕ್ಷೇಪ ರೋಹಿತ್ ವೇಮುಲ ಆತ್ಮಹತ್ಯೆಗೆ ಪ್ರಚೋದನೆ ನೀಡಿತು ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಆರೋಪಿಸಿದ್ದರು.
ಆರೋಪವನ್ನು ತಳ್ಳಿಹಾಕಿರುವ ದತ್ತಾತ್ರೇಯ, ವಿಶ್ವವಿದ್ಯಾಲಯದಲ್ಲಿ ಏನಾಗುತ್ತಿದೆ ಎಂಬುದನ್ನು ಸರ್ಕಾರದ ಗಮನಕ್ಕೆ ತರಬೇಕೆನ್ನುವುದು ನನ್ನ ಉದ್ದೇಶವಾಗಿತ್ತು. ರೋಹಿತ್ ಆತ್ಮಹತ್ಯೆ ಹಿಂದೆ ನಮ್ಮ ಹಸ್ತಕ್ಷೇಪವಿಲ್ಲ. ನನ್ನನ್ನು ತೇಜೋವಧೆ ಮಾಡುವ ಉದ್ದೇಶದಿಂದ ಈ ರೀತಿ ಜ್ಯೋತಿರಾಧಿತ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದತ್ತಾತ್ತ್ರೇಯ ಕಿಡಿ ಕಾರಿದ್ದಾರೆ. 
ವಿಶ್ವವಿದ್ಯಾಲಯವು ಜಾತಿವಾದಿ, ತೀವ್ರವಾದಿ ಹಾಗೂ ದೇಶದ್ರೋಹಿ ರಾಜಕೀಯದ ಕಾರಾಸ್ಥಾನವಾಗಿದೆಯೆಂದು ಆರೋಪಿಸಿ ಸಚಿವ ಬಂಡಾರು ದತ್ತಾತ್ರೇಯ ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಪತ್ರ ಬರೆದ ನಂತರ ರೋಹಿತ್ ವೇಮುಲಾ ಸೇರಿದಂತೆ ಐವರು ಸಂಶೋಧನಾ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿತ್ತು.
ಈ ಹಿನ್ನಲೆಯಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದರೆಂಬ ಆರೋಪದಲ್ಲಿ ಹೈದ್ರಾಬಾದ್ ಪೊಲೀಸರು, ಕೇಂದ್ರ ಸಚಿವ ದತ್ತಾತ್ರೇಯ, ಹೈದ್ರಾಬಾದ್ ವಿವಿಯ ಉಪಕುಲಪತಿ ಅಪ್ಪಾರಾವ್  ಹಾಗೂ ಎಬಿವಿಪಿಯ ಇಬ್ಬರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com