ಪಠಾಣ್ ಕೋಟ್ ಉಗ್ರ ದಾಳಿ; ಮಾಜಿ ಐಎಎಫ್ ಅಧಿಕಾರಿಯ ವಿಚಾರಣೆ

ಪಠಾಣ್‌ಕೋಟ್ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಐಎಸ್‌ಐಗೆ ಗೂಢಚರ್ಯೆ ಮಾಡಲು ಸಹಾಯ ಮಾಡಿದ ಆರೋಪದಲ್ಲಿ...
ರಂಜಿತ್ ಕೆಕೆ
ರಂಜಿತ್ ಕೆಕೆ
ನವದೆಹಲಿ: ಪಠಾಣ್‌ಕೋಟ್ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಐಎಸ್‌ಐಗೆ ಗೂಢಚರ್ಯೆ ಮಾಡಲು ಸಹಾಯ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಭಾರತೀಯ ವಾಯುಸೇನೆಯ ಮಾಜಿ ಅಧಿಕಾರಿ ರಂಜಿತ್ ಕೆಕೆ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.  
ವಾಯುಸೇನೆಯಿಂದ ವಜಾಗೊಂಡಿರುವ ರಂಜಿತ್‌ಗೆ ಈ ಉಗ್ರ ದಾಳಿಯಲ್ಲಿ ಕೈವಾಡವಿದೆಯೇ ಎಂಬುದರ ಬಗ್ಗೆ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಠಾಣ್ ಕೋಟ್‌ನಲ್ಲಿ ಶನಿವಾರ ಮುಂಜಾನೆ ವಾಯುನೆಲೆಯ ಮೇಲೆ ಉಗ್ರರು ದಾಳಿ ಮಾಡಿದ್ದರು. ಈ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ . 
ಭಾರತೀಯ ವಾಯುಸೇನೆಯಲ್ಲಿದ್ದ ರಂಜಿತ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಂಧಿತನಾಗಿದ್ದನು. ಐಎಸ್‌ಐ ಜತೆ ರಂಜಿತ್ ಕೆಲವು ಮಾಹಿತಿ ಹಂಚಿಕೊಂಡಿದ್ದು, ವಾಯುಸೇನೆಯಿಂದ ಈತನನ್ನು ವಜಾಗೈಯ್ಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com