
ನವದಹೆಲಿ: ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಉತ್ಪನ್ನಗಳ ಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ಶುಕ್ರವಾರ ಸಬ್ಸಿಡಿಯೇತರ ಅಡುಗೆ ಅನಿಲ ಪ್ರತಿ ಸಿಲಿಂಡರ್ ದರವನ್ನು ರು.50ಕ್ಕೆ ಹೆಚ್ಚಿಸಿದೆ. ಹೊಸ ದರ ಶುಕ್ರವಾರದಿಂದಲೇ ಚಾಲ್ತಿಗೆ ಬಂದಿದೆ.
ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಸಬ್ಸಿಡಿಯೇತರ ಅನಿಲ ದರ ಹೆಚ್ಚಳವಾಗಿದೆ. ಈ ಹಿಂದೆ ನವೆಂಬರ್‍ನಲ್ಲಿ ರು.60 ಹೆಚ್ಚಿಸಲಾಗಿತ್ತು. ವಾರ್ಷಿಕ 10 ಲಕ್ಷ ಆದಾಯ ಹೊಂದಿರುವ ಕುಟುಂಬಗಳಿಗೆ ಶುಕ್ರವಾರದಿಂದಲೇ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ.
ವಿಮಾನ ಇಂಧನ ದರ ಕಡಿತ: ಮತ್ತೊಂದು ಕಡೆ ಕೇಂದ್ರ ಸರ್ಕಾರ ವಿಮಾನ ಇಂಧನ ದರವನ್ನು ಕಡಿತಗೊಳಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗಣನೀಯ ಇಳಿಮುಖ ಕಾಣುತ್ತಿರುವುದರಿಂದ ಪ್ರತಿ ಕಿಲೋ ಲೀಟರ್ ದರ (ದೆಹಲಿಯಲ್ಲಿ)ವನ್ನು ರು.44,320.32 ರಿಂದ ರು.39,892.32ಕ್ಕೆ ಇಳಿಸಿದೆ. ವಿಮಾನ ಇಂಧನ ದರ ಇಳಿಯುತ್ತಿದ್ದಂತೆ ವಿಮಾನಯಾನ ಕಂಪನಿಗಳ ಷೇರು ದರಗಳು ಏರಿವೆ.
Advertisement