ಪಠಾಣ್ ಕೋಟ್ ವಾಯುನೆಲೆ ಮತ್ತೊಮ್ಮೆ ಕೇಳಿಸಿದ ಗುಂಡಿನ ಸದ್ದು: ಭಯೋತ್ಪಾದಕ ಅಡಗಿರುವ ಶಂಕೆ

ಜ.2 (ಶನಿವಾರ) ರಂದು ಭಯೋತ್ಪಾದಕರು ದಾಳಿ ನಡೆಸಿದ್ದ ಪಠಾಣ್ ಕೋಟ್ ವಾಯುನೆಲೆಯಲ್ಲಿ ಭಾನುವಾರದಂದು ಗುಂಡಿನ ಸದ್ದು, ಸ್ಫೋಟದ ಶಬ್ದ ಕೇಳಿಬಂದಿದೆ.
ಪಠಾಣ್ ಕೋಟ್  ವಾಯುನೆಲೆ(ಸಂಗ್ರಹ ಚಿತ್ರ)
ಪಠಾಣ್ ಕೋಟ್ ವಾಯುನೆಲೆ(ಸಂಗ್ರಹ ಚಿತ್ರ)

ಪಠಾಣ್ ಕೋಟ್: ಜ.2 (ಶನಿವಾರ) ರಂದು ಭಯೋತ್ಪಾದಕರು ದಾಳಿ ನಡೆಸಿದ್ದ ಪಠಾಣ್ ಕೋಟ್ ವಾಯುನೆಲೆಯಲ್ಲಿ ಭಾನುವಾರದಂದು ಗುಂಡಿನ ಸದ್ದು, ಸ್ಫೋಟದ ಶಬ್ದ ಕೇಳಿಬಂದಿದ್ದು, ವಾಯುನೆಲೆಯಲ್ಲಿ ಮತ್ತೊಬ್ಬ ಭಯೋತ್ಪಾದಕ ಅಡಗಿದ್ದಾನೆಂದು ಶಂಕಿಸಲಾಗಿದೆ.
ದಾಳಿ ನಡೆಸಿದ್ದ ನಾಲ್ವರು ಭಯೋತ್ಪಾದಕರನ್ನು ಈಗಾಗಲೇ ಹತ್ಯೆ ಮಾಡಲಾಗಿದೆ. ಆದರೆ ಪಠಾಣ್ ಕೊಟ್ ನಲ್ಲಿ ದಾಳಿ ನಡೆಸಿದ ಎಲ್ಲಾ ಉಗ್ರರನ್ನು ಹತ್ಯೆ ಮಾಡಲಾಗಿದೆಯೇ ಎಂಬ ಬಗ್ಗೆ ಸಂಶಯ ವ್ಯಕ್ತವಾಗಿದೆ. ಭಯೋತ್ಪಾದಕರನ್ನು ಹತ್ಯೆ ಮಾಡಿದ ನಂತರ ಭಾನುವಾರ ಕೈಗೊಂಡ ಶೋಧ ಕಾರ್ಯಾಚರಣೆ ಹಾಗೂ ಕೂಂಬಿಂಗ್ ಕಾರ್ಯಾಚರಣೆ ವೇಳೆ ಗುಂಡಿನ ಶಬ್ದ ಹಾಗೂ ಸ್ಫೋಟದ ಶಬ್ದ ಕೇಳಿಸಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.
ಐಎಎಫ್ ನ ಮಿಗ್ -21 , ಎಂಐ -35 ದಾಳಿ ಯುದ್ಧ ಹೆಲಿಕಾಫ್ಟರ್ ಗಳಿರುವ ತಾಂತ್ರಿಕ ವಲಯದಲ್ಲಿ ಸಂಪೂರ್ಣ ಶೋಧಕಾರ್ಯಾಚಾರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಪಡೆ, ಸೇನೆ, ರಾಷ್ಟ್ರೀಯ ಭದ್ರತಾ ಗಾರ್ಡ್ ಸಿಬ್ಬಂದಿಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com