ಪಠಾಣ್‌ಕೋಟ್: ಪಠಾಣ್‌ಕೋಟ್ ವಾಯುನೆಲೆಯಲ್ಲಿ ದಾಳಿ ಮಾಡಿದ ಎಲ್ಲ ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ ಎಂಬ ವರದಿ ಲಭಿಸಿದೆ..ಪಠಾಣ್‌ಕೋಟ್ ಉಗ್ರ ದಾಳಿ ನಡೆದ ಮೂರನೇ ದಿನವಾದ ಸೋಮವಾರವೂ ಗುಂಡಿನ ಚಕಮಕಿ ಮುಂದುವರಿದಿತ್ತು. ಈಗ 6 ಮಂದಿ ಉಗ್ರರನ್ನು ಸೇನೆ ಹತ್ಯೆ ಮಾಡಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ..ಬಲ್ಲ ಮೂಲಗಳ ಪ್ರಕಾರ ಎರಡು ಗುಂಪಿನ ಉಗ್ರರು ವಾಯುನೆಲೆ ಮೇಲೆ ದಾಳಿ ಮಾಡಿದ್ದಾರೆ..ಏತನ್ಮಧ್ಯೆ, ಜನವರಿ 15 ರಂದು ಪಾಕಿಸ್ತಾನದ ಜತೆ ವಿದೇಶಿ ಕಾರ್ಯದರ್ಶಿಗಳ ಸಭೆ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸುತ್ತಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics