ಅದಕ್ಕೆ ಪ್ರತಿಕ್ರಿಯಿಸಿರುವ ಕಂಪನಿಗಳು ಕೋರ್ಟ್ ಆದೇಶಿಸಿದಲ್ಲಿ ಮಾತ್ರ ಕಾಲ್ ಡ್ರಾಪ್ ಪರಿಹಾರ ನೀಡುತ್ತೇವೆ ಎಂದಿವೆ. ಕಳೆದ ಅಕ್ಟೋಬರ್‍ನಲ್ಲಿ ಟ್ರಾಯ್ ತನ್ನ ದೂರಸಂಪರ್ಕ ಗ್ರಾಹಕರ ರಕ್ಷಣಾ ನಿಯಮಗಳಿಗೆ ತಿದ್ದುಪಡಿ ತಂದು ಟೆಲಿಕಾಂ ಕಂಪನಿಗಳು ಪ್ರತಿ ಕಾಲ್ ಡ್ರಾಪ್‍ಗೆ ರು.1 ಪರಿಹಾರ ನೀಡುವ ನಿಯಮ ಸೇರ್ಪಡೆ ಗೊಳಿಸಿತ್ತು. ಈ ನಿಯಮದ ವಿರುದ್ಧ ಟೆಲಿಕಾಂ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿವೆ.