ಭೂಕಂಪದ ಪರಿಣಾಮ ಭಾಗಶಃ ಹಾನಿಗೊಳಗಾದ ಮಣಿಪುರ ವಿಧಾನಸಭಾ ಕಟ್ಟಡ

ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಂಭವಿಸಿರುವ ಭೂಕಂಪದ ಪರಿಣಾಮ 6 ಕ್ಕೂ ಹೆಚ್ಚು ಮೃತಪಟ್ಟಿರುವುದೂ ಅಲ್ಲದೇ ನೂತನವಾಗಿ ನಿರ್ಮಿಸಲಾಗಿದ್ದ ವಿಧಾನಸಭೆಯ ಕಟ್ಟಡಕ್ಕೂ ಹಾನಿ ಸಂಭವಿಸಿದೆ.
ಮಣಿಪುರ ವಿಧಾನಸಭೆ ಕಟ್ಟಡ
ಮಣಿಪುರ ವಿಧಾನಸಭೆ ಕಟ್ಟಡ

ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಂಭವಿಸಿರುವ ಭೂಕಂಪದ ಪರಿಣಾಮ 6 ಕ್ಕೂ ಹೆಚ್ಚು ಮೃತಪಟ್ಟಿರುವುದೂ ಅಲ್ಲದೇ ನೂತನವಾಗಿ ನಿರ್ಮಿಸಲಾಗಿದ್ದ ವಿಧಾನಸಭೆಯ ಕಟ್ಟಡಕ್ಕೂ ಹಾನಿ ಸಂಭವಿಸಿದೆ.
ನೂತನವಾಗಿ ನಿರ್ಮಿಸಲಾಗಿದ್ದ ಕಟ್ಟಡಕ್ಕೆ ಭಾಗಶಃ ಹಾನಿಯುಂಟಾಗಿದ್ದು, ಹೆಚ್ಚಿನ ತೀವ್ರತೆಯುಳ್ಳ ಮತ್ತೊಂದು ಭೂಕಂಪ ಸಂಭವಿಸಿದರೆ ಮಣಿಪುರದ ವಿಧಾನಸಭಾ ಕಟ್ಟಡ ಉಳಿಯುವುದಿಲ್ಲ ಎಂದು ಸ್ಥಳ ಪರಿಶೀಲನೆ ನಡೆಸಿದ ಇಂಜಿನಿಯರ್  ಹೇಳಿದ್ದಾರೆ.
ಭೂಕಂಪಕ್ಕೆ ಸಿಲುಕಿ ಪ್ರಸ್ತುತ ಇರುವ ವಿಧಾನಸಭಾ ಕಟ್ಟಡ ಶಿಥಿಲಗೊಂದಿರುವ ಹಿನ್ನೆಲೆಯಲ್ಲಿ, ತಜ್ಞರ ವರದಿ ನೀಡಿದ ಬಳಿಕ ಹೊಸ ಕಟ್ಟಡ ನಿರ್ಮಿಸಬೇಕೋ ಅಥವಾ ಈಗಿರುವುದನ್ನೇ ದುರಸ್ತಿಗೊಳಿಸಬೇಕೋ ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಈವರೆಗೂ 6 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರೆ,  100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com