ದ್ವಿಪೌರತ್ವ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಸಂಸತ್ತಿನ ನೈತಿಕ ಸಮಿತಿಗೆ ದೂರು

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ದ್ವಿ ಪೌರತ್ವ ಹೊಂದಿರುವ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ಮಹೀಶ್ ಗಿರಿ ಲೋಕಸಭೆ ಸ್ಪೀಕರ್ ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ದ್ವಿ ಪೌರತ್ವ ಹೊಂದಿರುವ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ಮಹೀಶ್ ಗಿರಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಗೆ ಪತ್ರ ಬರೆದಿದ್ದಾರೆ.

ದೂರು ಸ್ವೀಕರಿಸಿರುವ ಸ್ಪೀಕರ್ ಸುಮಿತ್ರಾ ಮಹಾಜನ್, ದೂರಿನ ಪ್ರತಿಯನ್ನು ಸಂಸತ್ತಿನ ನೈತಿಕ ಸಮಿತಿಗೆ ರವಾನಿಸಿದ್ದಾರೆ. ಯಾವುದೇ ಸಂಸದ, ಯಾವುದೇ ವಿಷಯವಾಗಿ ಸ್ಪೀಕರ್ ಗೆ ದೂರು ನೀಡಿದರೇ ,ಕಾನೂನು ಪ್ರಕಾರ ಆ ದೂರನ್ನು ಸಂಸತ್ತಿನ ನೈತಿಕ ಸಮಿತಿಗೆ ಶಿಫಾರಸು ಮಾಡುವುದು ಸ್ಪೀಕರ್ ಕರ್ತವ್ಯವಾಗಿದೆ ಎಂದು ಸುಮಿತ್ರಾ ಮಹಾಜನ್ ಹೇಳಿದ್ದಾರೆ.

ನೈತಿಕ ಸಮಿತಿಗೆ ಎಲ್.ಕೆ ಅಡ್ವಾಣಿ ಅಧ್ಯಕ್ಷರಾಗಿದ್ದಾರೆ. ರಾಹುಲ್ ಗಾಂಧಿ ದ್ವಿ ಪೌರತ್ವದ ಬಗ್ಗೆ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪ ಮಾಡಿದ್ದರು. ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆಯೆಂದು ಬ್ರಿಟನ್ ನಲ್ಲಿ ಹೇಳಿಕೊಳ್ಳುತ್ತಾರೆ ಎಂದು ಆರೋಪಿಸಿದ್ದರು.

ಈ ಸಂಬಂಧ ಸ್ಪೀಕರ್ ಗೆ ಪತ್ರ ಬರೆದಿರುವ ಪೂರ್ವ ದೆಹಲಿ ಸಂಸದ ಮಹೀಶ್ ಗಿರಿ, ರಾಹುಲ್ ಗಾಂಧಿ ದ್ವಿ ಪೌರತ್ವ ದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com