ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

2015ರಲ್ಲಿ ಅತಿ ಹೆಚ್ಚು ದ್ವೇಷಿಸಲ್ಪಟ್ಟ ಭಾರತೀಯ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು 2015ರಲ್ಲಿ ಅತಿ ಹೆಚ್ಚು ದ್ವೇಷಿಸಲ್ಪಟ್ಟ ಭಾರತೀಯ ಎಂಬ ಕುಖ್ಯಾತಿಗೆ...
ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು 2015ರಲ್ಲಿ ಅತಿ ಹೆಚ್ಚು ದ್ವೇಷಿಸಲ್ಪಟ್ಟ ಭಾರತೀಯ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
'ದಿ ಗೂಂಜ್ ಇಂಡಿಯಾ ಇಂಡೆಕ್ಸ್ 2015ರಲ್ಲಿ ಮೊದಲ ಸ್ಥಾಪ ಪಡೆದಿರುವ ಅರವಿಂದ್ ಕೇಜ್ರಿವಾಲ್ ಅವರು ಡಿಜಿಟಲ್ ಮೀಡಿಯಾದಲ್ಲಿ 1.99 ಲಕ್ಷ ಮತ ಪಡೆದಿದ್ದಾರೆ.' 
'ದಿ ಗೂಂಜ್ ಇಂಡಿಯಾ ಇಂಡೆಕ್ಸ್  ಭಾರತೀಯರು ಯಾವುದೇ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಮತ್ತು ಡಿಜಿಟಲ್ ಮೀಡಿಯಾದಲ್ಲಿ ಯಾವುದರ ಬಗ್ಗೆ ಹೆಚ್ಚು ಚರ್ಚೆಯಾಗಿದೆ ಎಂಬುದರ ಬಗ್ಗೆ ಸಮೀಕ್ಷೆ ಮಾಡುತ್ತದೆ. 2015ರಲ್ಲಿ ಅರವಿಂದ್ ಕೇಜ್ರಿವಾಲ್ ಬಗ್ಗೆ ಹೆಚ್ಚು ನಕಾರಾತ್ಮಕ ಭಾವನೆ ಹೊಂದಿರುವುದು ಪತ್ತೆಯಾಗಿದೆ.
ಅರವಿಂದ್ ಕೇಜ್ರಿವಾಲ್ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಎರಡನೇ ಸ್ಥಾನದಲ್ಲಿದ್ದು, ಬಾಲಿವುಡ್ ನಟ ಅಮಿರ್ ಖಾನ್ ಮೂರನೇ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ದ್ವೇಷಿಸಲ್ಪಟ್ಟ 10 ವ್ಯಕ್ತಿಗಳಲ್ಲಿ ಟಿವಿ ಪತ್ರಕರ್ತ ಅರ್ನಬ್ ಗೋಸ್ವಾಮಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಾಲಿವುಡ್ ನಟ ಶಾರೂಖ್ ಖಾನ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಗುಜರಾತ್ನಲ್ಲಿ ಪಟೇಲ್ ಮೀಸಲಾತಿಗಾಗಿ ಹೋರಾಟ ನಡೆಸಿದ ಹಾರ್ದಿಕ್ ಪಟೇಲ್ ಹಾಗೂ ಗಾಯಕ ಯೋ ಯೋ ಹನಿ ಸಿಂಗ್ ಸ್ಥಾನ ಪಡೆದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com