ಉತ್ತರ ಕೊರಿಯಾ ಪರಮಾಣು ಕಾರ್ಯಕ್ರಮದಲ್ಲಿ ಎಕ್ಯು ಖಾನ್ ಪಾತ್ರ: ಭಾರತ

ಉತ್ತರ ಕೊರಿಯಾ ದೇಶದ ಪರಮಾಣು ಪರೀಕ್ಷೆಗೆ ಅಂತಾರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಖಂಡನೆ...
ಉತ್ತರ ಕೊರಿಯಾದ ಸರ್ವೋಚ್ಛ ನಾಯಕ ಕಿಮ್ ಜಾಂಗ್ ಉನ್
ಉತ್ತರ ಕೊರಿಯಾದ ಸರ್ವೋಚ್ಛ ನಾಯಕ ಕಿಮ್ ಜಾಂಗ್ ಉನ್
Updated on

ನವದೆಹಲಿ: ಉತ್ತರ ಕೊರಿಯಾ ದೇಶದ ಪರಮಾಣು ಪರೀಕ್ಷೆಗೆ ಅಂತಾರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವುದು ಮತ್ತು ಅದಕ್ಕೆ ಭಾರತ ಕೂಡ ದನಿಗೂಡಿಸುತ್ತಿರುವುದು ಹಳೆಯ ಸಂಗತಿ. ಇದೀಗ ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮಕ್ಕೆ ಪಾಕಿಸ್ತಾನದ ನೇರ ಸಂಪರ್ಕವಿದೆ ಎಂಬ ವಿಷಯವನ್ನು ಭಾರತ ಪ್ರತಿಪಾದಿಸುತ್ತಿದೆ. ಉತ್ತರ ಕೊರಿಯಾದ ಹೈಡ್ರೋಜನ್ ಬಾಂಬ್ ಪರೀಕ್ಷೆಯು ಸಿನಿಕತನ ಎಂದು ಭಾರತ ಹೇಳಿದೆ.

ಉತ್ತರ ಕೊರಿಯಾ ನಿನ್ನೆ ಅಂತಾರಾಷ್ಟ್ರೀಯ ಕಾಲಮಾನ 1.30ರ ಮಧ್ಯರಾತ್ರಿ ವೇಳೆಗೆ  ಚೀನಾದ ಗಡಿಭಾಗ ಪುಂಘ್ಯೆ-ರಿಯಲ್ಲಿ ಸಣ್ಣ ಗಾತ್ರದ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಘೋಷಿಸಿತ್ತು. ಇದು ತನ್ನ 4ನೇ ಪರಮಾಣು ಪರೀಕ್ಷೆಯಾಗಿದ್ದು, ಮೊದಲ ಹೈಡ್ರೋಜನ್ ಬಾಂಬ್ ಪರೀಕ್ಷೆ ಎಂದು ಕೂಡ ಸಾರಿತ್ತು.
ಆದರೆ ಉತ್ತರ ಕೊರಿಯಾದ ಹೇಳಿಕೆಯನ್ನು ಭಾರತ ಒಪ್ಪುತ್ತಿಲ್ಲ. ನಮಗೆ ಸಿಕ್ಕಿದ ಮಾಹಿತಿಯ ಆಧಾರದ ಮೇಲೆ ನಾವು ಇದು ವೇಗೋತ್ಕರ್ಷದ ಪರೀಕ್ಷೆ ಎಂದು ನಿರ್ಧರಿಸುತ್ತಿದ್ದೇವೆ. ಇದೊಂದು ಬಹಳ ಆತಂಕಕಾರಿ ವಿಷಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳ ಬದ್ಧತೆಯನ್ನು ಉತ್ತರ ಕೊರಿಯಾ ಉಲ್ಲಂಘಿಸಿದೆ. ಈ ರೀತಿಯ ಕೆಲಸಗಳನ್ನು ಮಾಡದಂತೆ ನಾವು ಉತ್ತರ ಕೊರಿಯಾ ದೇಶವನ್ನು ಕೋರುತ್ತೇವೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ, ಭದ್ರತೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

ಈಶಾನ್ಯ ಏಷ್ಯಾ ಮತ್ತು ನಮ್ಮ ನೆರೆಯ ದೇಶದೊಂದಿಗೆ ಪರಮಾಣು ಪ್ರಸರಣದ ಬಗ್ಗೆ ನಮಗೆ ಚೆನ್ನಾಗಿ ಅರಿವಿದೆ.ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಜನಕ ಎಕ್ಯು ಖಾನ್ ಪರಮಾಣು ತಂತ್ರಜ್ಞಾನವನ್ನು ಉತ್ತರ ಕೊರಿಯಾಕ್ಕೆ ವರ್ಗಾಯಿಸುವಲ್ಲಿ ನೇರ ಪಾತ್ರ ವಹಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಮಾಣು ವ್ಯಾಪಾರದಲ್ಲಿ ತೊಡಗಿದ್ದಕ್ಕೆ ಅವರು 2004ರಲ್ಲಿ ಅಂದಿನ ಪಾಕ್ ಅಧ್ಯಕ್ಷ ಪರ್ವೇಜ್ ಮುಶರಫ್ ಅವರ ಹತ್ತಿರ ಟೆಲಿವಿಷನ್ ಮೂಲಕ ಕ್ಷಮೆಯನ್ನು ಕೂಡ ಕೋರಿದ್ದರು. 90ರ ದಶಕದಲ್ಲಿ ಪ್ರತಿ ತಿಂಗಳು ಉತ್ತರ ಕೊರಿಯಾಕ್ಕೆ ಪರಮಾಣು ತಂತ್ರಜ್ಞಾನವನ್ನು ಒಯ್ದು ಅಲ್ಲಿನ ಕೆಲಸದಲ್ಲಿ ನೆರವಾಗುತ್ತಿದ್ದರು. ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಲು ಖಾನ್ ಅವರ ಪಾತ್ರ ಪ್ರಮುಖವಾಗಿತ್ತು ಎಂದು ಭಾರತ ನೇರವಾಗಿ ಹೇಳುತ್ತಿದೆ.

ಅಮೆರಿಕದ ಅಪಾಯಕಾರಿ ಪರಮಾಣು ಶಸ್ತ್ರಾಸ್ತ್ರಗಳಿಗೆ ಪ್ರತಿಯಾಗಿ ಪರಮಾಣು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕೊರಿಯಾ ಹೇಳಿದೆ. ಉತ್ತರ ಕೊರಿಯಾ ದೇಶದ ಮೈತ್ರಿ ರಾಷ್ಟ್ರ ಚೀನಾ ಕೂಡ ಪರಮಾಣು ಪರೀಕ್ಷೆಗೆ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿದೆ. ಚೀನಾ ದೃಢವಾಗಿ ", ಕೊರಿಯನ್ ದ್ವೀಪದ ಅಣ್ವಸ್ತ್ರ ನಾಶವನ್ನು ಬಯಸುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಹುವಾ ಚುನಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com