ಸನಾತನ ಸಂಸ್ಥೆಯಿಂದ ಸಾಹಿತಿ ಸಬ್ನೀಸ್‍ಗೆ ಜೀವ ಬೆದರಿಕೆ?

ಸನಾತನ ಸಂಸ್ಥೆಯ ಕಾನೂನು ಸಲಹೆಗಾರ, ವಕೀಲ ಸಂಜೀವ ಪುನಾಳೆಕರ ಮಾಡಿದ ಟ್ವೀಟೊಂದು ಮಹಾರಾಷ್ಟ್ರ ಹಾಗೂ ಮತ್ತೆ ಬಿರುಗಾಳಿ ಎಬ್ಬಿಸಿದೆ.
ಸನಾತನ ಸಂಸ್ಥೆಯಿಂದ ಸಾಹಿತಿ ಸಬ್ನೀಸ್‍ಗೆ ಜೀವ ಬೆದರಿಕೆ?
ಸನಾತನ ಸಂಸ್ಥೆಯಿಂದ ಸಾಹಿತಿ ಸಬ್ನೀಸ್‍ಗೆ ಜೀವ ಬೆದರಿಕೆ?

ಬೆಳಗಾವಿ: ಮಹಾರಾಷ್ಟ್ರದಲ್ಲಿ ಅಂಧಶ್ರದ್ಧೆ ನಿರ್ಮೂಲನೆಗೆ ಹೋರಾಡಿದ ಡಾ.ನರೇಂದ್ರ ಧಾಬೋಲ್ಕರ್ ಹಾಗೂ ವಿಚಾರವಾದಿ ಗೋವಿಂದ ಪನ್ಸಾರೆ ಅವರ  ಹತ್ಯೆಯ ವಿಚಾರ ಹಸಿರಾಗಿರುವ ಮಧ್ಯೆಯೇ ಸನಾತನ ಸಂಸ್ಥೆಯ ಕಾನೂನು ಸಲಹೆಗಾರ, ವಕೀಲ ಸಂಜೀವ ಪುನಾಳೆಕರ ಮಾಡಿದ ಟ್ವೀಟೊಂದು ಮಹಾರಾಷ್ಟ್ರ ಹಾಗೂ ಮತ್ತೆ ಬಿರುಗಾಳಿ ಎಬ್ಬಿಸಿದೆ.

ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ, ಸಾಹಿತಿ, ವಿಚಾರವಾದಿ ಪುಣೆಯ ಡಾ. ಶ್ರೀಪಾಲ ಸಬ್ನೀಸ್ ಅವರಿಗೆ ಟ್ವೀಟ್ ಮಾಡಿರುವ
ಪುನಾಳೆಕರ, ``ನೀವು ಬೇಗನೆ ಎದ್ದು ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗಿ ಡಾ. ಶ್ರೀಪಾಲ ಸಬ್ನೀಸ್,'' ಎಂದು ಬರೆದಿದ್ದಾರೆ. ಈಗಾಗಲೇ ಬೆಳಗಿನ ವಾಯು
ವಿಹಾರಕ್ಕೆ ಹೋದ ಸಂದರ್ಭದಲ್ಲಿಯೇ  ದಾಬೋಲಕರ, ಪಾನ್ಸರೆ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯ್ಯಲಾಗಿದೆ. ಇದೀಗ ಈ ಟ್ವೀಟ್ ಸಹ ಜೀವ ಬೆದರಿಕೆ ರೀತಿಯೇ ಇದೆ. ಇದರ ಹಿಂದಿನ ಉದ್ದೇಶವನ್ನು ಅರಿಯಬೇಕು ಎಂಬುದು ವಿಚಾರವಾ ದಿಗಳು, ಪ್ರಗತಿಪರರ ಆಗ್ರಹವಾಗಿದೆ.

ಈ ಮಧ್ಯೆ ಪುಣೆಯ ಪಿಂಪ್ರಿಯಲ್ಲಿ ನಡೆಯಲಿರುವ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರೂ ಆಗಿರುವ ಡಾ. ಶ್ರೀಪಾಲ ಸಬ್ನೀಸ್ ಪ್ರತಿಕ್ರಿಯೆ ನೀಡಿ, "ನಾನು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ. ಗುಂಡಿಗೆ ಎದೆಯೊಡ್ಡುತ್ತೇನೆ. ಆದರೆ, ಸತ್ಯದ ಪರವಾಗಿ ಹೋರಾಡುತ್ತೇನೆ. ಸತ್ಯಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ,'' ಎಂದು ಹೇಳಿದ್ದಾರೆ. ಟ್ವೀಟ್ ಮೂಲಕ ಮುಂಜಾನೆ ವಾಯು ವಿಹಾರಕ್ಕೆ ಬರುವಂತೆ ಆಹ್ವಾನಿಸಲಾಗಿದೆ. ಇದು ಅಸ್ವಾಭಾವಿಕ ಟ್ವೀಟ್ ಹಾಗೂ ಪ್ರಚೋದನೆ ರೀತಿಯ ಜೀವ ಬೆದರಿಕೆಯ ರೂಪದಲ್ಲಿ ಇದೆ. ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆಯೋ ನೋಡೋಣ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com