10 ವರ್ಷದಲ್ಲಿ 7.5 ಲಕ್ಷ ಕ್ರೈಸ್ತ, ಮುಸ್ಲಿಂರ ಘರ್ ವಾಪಸಿ: ತೊಗಾಡಿಯ

ಘರ್ ವಾಪಸಿ ಕುರಿತಂತೆ ಹಲವು ವಿರೋಧದ ನಡುವೆಯು ಕಳೆದ ಹತ್ತು ವರ್ಷಗಳಲ್ಲಿ 5 ಲಕ್ಷ ಕ್ರೈಸ್ತರು ಹಾಗೂ 2.5 ಲಕ್ಷ ಮುಸ್ಲಿಂರನ್ನು ಹಿಂದೂ ಧರ್ಮಕ್ಕೆ ಮತಾಂತರ...
ಘರ್ ವಾಪಸಿ
ಘರ್ ವಾಪಸಿ

ಸೂರತ್: ಘರ್ ವಾಪಸಿ ಕುರಿತಂತೆ ಹಲವು ವಿರೋಧದ ನಡುವೆಯು ಕಳೆದ ಹತ್ತು ವರ್ಷಗಳಲ್ಲಿ 5 ಲಕ್ಷ ಕ್ರೈಸ್ತರು ಹಾಗೂ 2.5 ಲಕ್ಷ ಮುಸ್ಲಿಂರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

ದೇಣಿಗೆ ಸಂಗ್ರಹ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹಿಂದೂ ಧರ್ಮವನ್ನು ಉಳಿಸಲು ಇದನ್ನು ಬೃಹತ್ ಪ್ರಮಾಣದಲ್ಲಿ ಮುಂದುವರಿಸುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 10 ವರ್ಷಗಳಲ್ಲಿ 5 ಲಕ್ಷ ಕ್ರೈಸ್ತರು ಮತ್ತು 2.5 ಲಕ್ಷ ಮುಸ್ಲಿಂರನ್ನು ಘರ್ ವಾಪಸಿ ಮಾಡಿದ್ದೇವೆ. ಪ್ರತಿ ವರ್ಷ 15,000 ಜನರಂತೆ ನಾವು ಘರ್ ವಾಪಸಿ ಮಾಡಿದ್ದೇವೆ. ಆದರೆ ಕಳೆದ ವರ್ಷ ಇದು 40,000ದ ಗಡಿ ದಾಟಿದೆ ಎಂದು ತೊಗಾಡಿಯ ಹೇಳಿದ್ದಾರೆ.

ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿ ಉಳಿಯಬೇಕಾದರೆ ಮತ್ತು ಹಿಂದೂ ಧರ್ಮವನ್ನು ಉಳಿಸಬೇಕಾದರೆ, ನಾವು ಇನ್ನಷ್ಟು ಘರ್ ವಾಪಸಿ ಅಭಿಯಾನವನ್ನು ದೊಡ್ದ ಮಟ್ಟದಲ್ಲಿ ನಡೆಸಿ, ಕೋಟ್ಯಂತರ ಜನರನ್ನು ನಮ್ಮ ಧರ್ಮದೊಳಗೆ ಕರೆ ತರಬೇಕು ಎಂದು ತೊಗಾಡಿಯ ಹೇಳಿದ್ದಾರೆ.

ಕಾರ್ಯಕ್ರಮದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ತೊಗಾಡಿಯ, ಪಾಕಿಸ್ತಾನದಲ್ಲಿರುವ ಎಲ್ಲಾ ಹಿಂದೂಗಳಿಗೆ ಭಾರತದ ಪೌರತ್ವ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಖಚಿತವಾಗಿಯೂ ನಿರ್ಮಾಣವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com