ದಾದ್ರಿ ಹತ್ಯೆ ಪ್ರಕರಣ: ಅಖ್ಲಾಕ್ ಪುತ್ರನಿಗೆ ಗ್ರೇಟರ್ ನೋಯ್ಡಾದಲ್ಲಿ ನಾಲ್ಕು ಫ್ಲಾಟ್ ನೀಡಿದ ಸರ್ಕಾರ

ಗೋಮಾಂಸ ಸಂಗ್ರಹ ಆರೋಪದ ಮೇಲೆ ದಾದ್ರಿಯಲ್ಲಿ ಹತ್ಯೆಯಾಗಿದ್ದ ಅಖ್ಲಾಕ್ ಪುತ್ರನಿಗೆ ಉತ್ತರ ಪ್ರದೇಶ ಸರ್ಕಾರ ಗ್ರೇಟರ್ ನೋಯ್ಡಾದಲ್ಲಿ ನಾಲ್ಕು ಫ್ಲಾಟ್ ....
ಮೃತ ಅಖ್ಲಾಕ್
ಮೃತ ಅಖ್ಲಾಕ್

ನವದೆಹಲಿ: ಗೋಮಾಂಸ ಸಂಗ್ರಹ ಆರೋಪದ ಮೇಲೆ ದಾದ್ರಿಯಲ್ಲಿ ಹತ್ಯೆಯಾಗಿದ್ದ ಅಖ್ಲಾಕ್ ಪುತ್ರನಿಗೆ ಉತ್ತರ ಪ್ರದೇಶ ಸರ್ಕಾರ ಗ್ರೇಟರ್ ನೋಯ್ಡಾದಲ್ಲಿ ನಾಲ್ಕು ಫ್ಲಾಟ್ ಗಳನ್ನು ನೀಡಿದೆ.

ಉತ್ತರ ಪ್ರದೇಶ ಸರ್ಕಾರ ಕಳೆದ 5 ತಿಂಗಳ ಹಿಂದೆ ನೀಡಿದ್ದ ಭರವಸೆಯಂತೆ ನಾಲ್ಕು ಫ್ಲಾಟ್ ಗಳನ್ನು ಮೃತ ಅಖ್ಲಾಕ್ ಪತ್ನಿ ಇಕ್ರಮಾನ್ ಮತ್ತು ಪುತ್ರರಾದ ಜಾನಾ ಮೊಹಮದ್,  ಅಫ್ಜಲ್ ಅಹ್ಮದ್ ಮತ್ತು ಜಮೀಲ್ ಅಹ್ಮದ್ ಅವರ ಹೆಸರಿಗೆ ಗ್ರೇಟರ್ ನೋಯ್ಡಾ ಪ್ರಾಧಿಕಾರ ನೋಂದಣಿ ಮಾಡಿಸಿದೆ.

ಮುಖ್ಯಮಂತ್ರಿಯವರ ವಿವೇಚನಾ ನಿಧಿಯಿಂದ ಈ ಫ್ಲಾಟ್ ಗಳನ್ನು ನೀಡಲಾಗಿದೆ. ಒಂದು ಫ್ಲಾಟ್  ನ ಬೆಲೆ 20 ರಿಂದ 24 ಲಕ್ಷ ರೂಪಾಯಿ ಗಳಿದ್ದು, ಪ್ರತಿ ಫ್ಲಾಟ್ ಗೆ ಅಖ್ಲಾಕ್ ಕುಟುಂಬ 9.5 ಲಕ್ಷ ರು. ಪಾವತಿಸಿದೆ.

ಕಳೆದ ಸೆಪ್ಟಂಬರ್ ನಲ್ಲಿ ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸಂಗ್ರಹಿಸಿದ್ದಾರೆಂಬ ಆರೋಪದ ಮೇಲೆ  ಮೊಹಮದ್ ಅಖ್ಲಾಕ್ ಎಂಬುವನನ್ನು ಗಲಭೆ ಕೋರರ ಗುಂಪು ಥಳಿಸಿ ಹತ್ಯೆ ಮಾಡಿತ್ತು .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com