ಗಣರಾಜ್ಯ ದಿನದ ಪಥಸಂಚಲನಕ್ಕೆ ಫ್ರಾನ್ಸ್ ಪಡೆ ಸಾಥ್

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಗಣರಾಜ್ಯೋತ್ಸವದಂದು ನಮ್ಮ ಸೇನಾಪಡೆ ಜತೆಗೆ ಫ್ರಾನ್ಸ್ ಸೇನಾಪಡೆ ಪಥಸಂಚಲನ ನಡೆಸಲಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾನ್‍...
ಫ್ರೆಂಚ್ ಸೇನೆ
ಫ್ರೆಂಚ್ ಸೇನೆ

ನವದೆಹಲಿ: ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಗಣರಾಜ್ಯೋತ್ಸವದಂದು ನಮ್ಮ ಸೇನಾಪಡೆ ಜತೆಗೆ ಫ್ರಾನ್ಸ್ ಸೇನಾಪಡೆ ಪಥಸಂಚಲನ ನಡೆಸಲಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾನ್‍ ಸ್ವ ಒಲಾಂದ್ ಈ ಬಾರಿಯ ನಮ್ಮ ಗಣರಾಜ್ಯೋತ್ಸವ ಅತಿಥಿ. ಇದೇ ಸಮಯದಲ್ಲಿ, ಜಂಟಿ ಸೇನಾಭ್ಯಾಸಕ್ಕಾಗಿ ಫ್ರಾನ್ಸ್ ಸೇನಾಪಡೆ ಭಾರತಕ್ಕೆ ಬರಲಿದ್ದು, ನಮ್ಮ ಯೋಧರೊಂದಿಗೆ ಪಥಸಂಚಲನ ನಡೆಸಲು ಫ್ರಾನ್ಸ್ ಸೈನಿಕರು ಸಿದ್ಧರಾಗಿದ್ದಾರೆ. 2009ರಲ್ಲಿ ಭಾರತವೂ ಫ್ರಾನ್ಸ್‍ನಲ್ಲಿ ಇಂತಹುದೇ ಪಥಸಂಚಲನ ನಡೆಸಿತ್ತು. ಫ್ರೆಂಚ್ ಕ್ರಾಂತಿ ಆರಂಭವಾದ ನೆನಪಿನಲ್ಲಿ ನಡೆದ ಬ್ಯಾಸ್ಟಿಲೆ ಡೇ ಎಂಬ ಕಾರ್ಯಕ್ರಮದಲ್ಲಿ ಭಾರ ತದ ಅತಿ ಹಳೆಯ ರೆಜಿಮೆಂಟ್ ದಿ ಮರಾಠಾ ಲೈಟ್ ಇನ್ ಫೆಂಟ್ರಿಯು ಫ್ರಾನ್ಸ್‍ಗೆ ತೆರಳಿ, ಅಲ್ಲಿನ ಯೋಧರಿಗೆ ಪಥಸಂಚಲನದಲ್ಲಿ ಸಾಥ್ ನೀಡಿತ್ತು. ಆಗ ಪ್ರಧಾನಿಯಾಗಿದ್ದ ಮನಮೋ ಹನ್‍ಸಿಂಗ್ ಪ್ಯಾರಿಸ್‍ನಲ್ಲೇ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com