
ನವದೆಹಲಿ: ಜಾಗತಿಕ ಆರ್ಥಿಕತೆಯಲ್ಲಿನ ಹಿಂಜರಿತದಿಂದಾಗಿ ಬೇಡಿಕೆ ಕುಸಿತ ಕಂಡಿರುವುದ ಮತ್ತು ಪ್ರಮುಖವಾಗಿ ಕಚ್ಚಾ ತೈಲ ಉತ್ಪಾದಿಸುವ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ತೈಲ ಉತ್ಪಾದಿಸುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ದಿನೇ ದಿನೇ ಕುಸಿಯುತ್ತಿವೆ. ಭಾರತದ ಖರೀದಿ ಒಪ್ಪಂದಗಳ ಸರಾಸರಿ ದರವೂ ದಾಖಲೆ ಇಳಿಮುಖ ಕಂಡಿದೆ. ಗುರುವಾರದ ವಹಿವಾಟಿನಲ್ಲಿ ಭಾರತದ ಖರೀದಿ ಒಪ್ಪಂದ ದರ ಪ್ರತಿ ಬ್ಯಾರಲ್‍ಗೆ 29.24 ಡಾಲರ್‍ಗೆ ಕುಸಿದಿದೆ. ಇನ್ನಷ್ಟು ದಿನ ಇದೇ ದರ ಮುಂದುವರೆದರೆ ಜನವರಿ ತಿಂಗಳ ಸರಾಸರಿ ದರ 12 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಯಲಿದೆ. ಭಾರತ ಖರೀ ದಿಸುವ ಕಚ್ಚಾ ತೈಲ ಸರಾಸರಿ ದರ ಓಮನ್ ಮತ್ತು ದುಬೈನ ಸರಾಸರಿ ದರಗಳಿಗೆ ಅನುಗುಣವಾಗಿ ಇರಲಿದೆ. 2003ರ ಡಿಸೆಂಬರ್‍ನಿಂದಲೂ ಪ್ರತಿ ತಿಂಗಳ ಸರಾಸರಿ ದರ 30 ಡಾಲರ್‍ಗಿಂತಲೂ ಹೆಚ್ಚಿನ ಮಟ್ಟದಲ್ಲೇ ಮುಂದುವರೆದಿದೆ. ಕಳೆದ ಡಿಸೆಂಬರ್‍ನಲ್ಲೂ ಈ ಸರಾಸರಿ ದರ 35.68 ಡಾಲರ್ ಇತ್ತು. ರುಪಾಯಿ ದರದಲ್ಲಿ ಭಾರತ ಖರೀದಿ ಸುವ ಬ್ಯಾರಲ್ ದರ ಗುರುವಾರ
ಕುಸಿತದತ್ತ ಮುಖ
ಪ್ರತಿ ಬ್ಯಾರಲ್ ದರ 29.24 ಡಾಲರ್‍ಗೆ ಕುಸಿತ, ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿತ, ಬೇಡಿಕೆ ಕಳೆದುಕೊಂಡ ಸರಕುಗಳು, ತೈಲ ಕಂಪನಿಗಳ ಆದಾಯಕ್ಕೆ ಧಕ್ಕೆ, ಹೊಸ ಅನ್ವೇಷಣೆ, ಯೋಜನೆಗಳಿಂದ ದೂರ
Advertisement