ಸರ್ಕಾರಿ ಕಾರ್ಯಕ್ರಮದ 1,500 ಪಾಸ್‍ಗೆ ಲಕ್ಷ ಮಂದಿ ಸಾಲು

ರಾಕ್ ಮ್ಯೂಸಿಕ್, ಕ್ರಿಕೆಟ್ ಪಂದ್ಯ ಇದ್ದರೆ ಟಿಕೆಟ್‍ಗಳಿಗೆ ನೂಕುನುಗ್ಗಲು ಏರ್ಪಡುವುದನ್ನು ನೋಡಿದ್ದೇವೆ. ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಜನರು ಬರುವುದೆಂದರೆ...
ಸ್ಟಾರ್ಟ್ ಆಪ್
ಸ್ಟಾರ್ಟ್ ಆಪ್
Updated on

ನವದೆಹಲಿ: ರಾಕ್ ಮ್ಯೂಸಿಕ್, ಕ್ರಿಕೆಟ್ ಪಂದ್ಯ ಇದ್ದರೆ ಟಿಕೆಟ್‍ಗಳಿಗೆ ನೂಕುನುಗ್ಗಲು ಏರ್ಪಡುವುದನ್ನು ನೋಡಿದ್ದೇವೆ. ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಜನರು ಬರುವುದೆಂದರೆ ಆಶ್ಚರ್ಯವೇ ಸರಿ. ಶನಿವಾರ ಇಲ್ಲಿ ಕೇಂದ್ರ ಸರ್ಕಾರ ಸ್ಟಾರ್ಟ್ ಆಪ್ ಸಮಾವೇಶ ಆಯೋಜಿಸಿದೆ. ಇದಕ್ಕೆ 1,500 ಮಂದಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಿದೆ. ಈ 1,500 ಟಿಕೆಟ್ ಪಡೆಯಲು 1 ಲಕ್ಷ ಮಂದಿ ಸಾಲುಗಟ್ಟಿ ನಿಂತಿದ್ದಾರೆ. ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವ ನಿರೀಕ್ಷೆಗಳಿದ್ದು ಸ್ಟಾರ್ಟ್‍ಅಪ್ ಗಳಿಗೆ ಹಲವು ಸೌಲಭ್ಯ, ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಗಳಿವೆ. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾದಂತಹ ಸಮಾವೇಶಗಳಲ್ಲಿ ಮುಖೇಶ್ ಅಂಬಾನಿಯಂತಹ ಉದ್ಯಮಿಗಳು ಪಾಲ್ಗೊಂಡಿದ್ದರು. ಈ ಸಮಾವೇಶ ಸಂಪೂರ್ಣವಾಗಿ ಯುವಕರಿಗೆ ಸೀಮಿತವಾಗಿರುವುದರಿಂದ ಟಿಕೆಟ್‍ಗೆ ಮುಗಿಬಿದ್ದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com