ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ
ದೇಶ
ಪಠಾಣ್‌ಕೋಟ್ ವಾಯುನೆಲೆಯಿಂದ ಮೊಬೈಲ್‌ಫೋನ್, ಎಕೆ 47 ಮ್ಯಾಗಜಿನ್ ಪತ್ತೆ
ಪಠಾಣ್ ಕೋಟ್ ವಾಯುನೆಲೆ ದಾಳಿ ಪ್ರಕರಣ ತನಿಖೆ ಮಾಡುತ್ತಿರುವ ರಾಷ್ಟ್ರೀಯ ತನಿಖಾ ದಳಕ್ಕೆ ವಾಯುನೆಲೆಯಿಂದ ಹಲವಾರು ಸಾಕ್ಷ್ಯಗಳು ಲಭ್ಯವಾಗಿವೆ...
ಪಠಾಣ್‌ಕೋಟ್: ಪಠಾಣ್ ಕೋಟ್ ವಾಯುನೆಲೆ ದಾಳಿ ಪ್ರಕರಣ ತನಿಖೆ ಮಾಡುತ್ತಿರುವ ರಾಷ್ಟ್ರೀಯ ತನಿಖಾ ದಳಕ್ಕೆ ವಾಯುನೆಲೆಯಿಂದ ಹಲವಾರು ಸಾಕ್ಷ್ಯಗಳು ಲಭ್ಯವಾಗಿವೆ.
ತನಿಖಾ ದಳಕ್ಕೆ ಪ್ರಸ್ತುತ ಪ್ರದೇಶದಿಂದ ಎಕೆ 47 ಮ್ಯಾಗಜಿನ್, ದೂರದರ್ಶಕ ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ.
ಅದೇ ವೇಳೆ ಪಠಾಣ್‌ಕೋಟ್ ದಾಳಿಯಲ್ಲಿ ಹತ್ಯೆಗೀಡಾದ ಉಗ್ರರ ಬಗ್ಗೆ ಬ್ಲಾಕ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ತನಿಖಾ ದಳದವರು ಇಂಟರ್‌ಪೋಲ್‌ಗೆ ಪತ್ರ ಬರೆಯಲಿದ್ದಾರೆ.
ಅಷ್ಟೇ ಅಲ್ಲದೆ ದಾಳಿಗೆ ಸಂಬಂಧಿಸಿದಂತೆ ಎಸ್ಪಿ ಸಲ್ವಿಂದರ್ ಸಿಂಗ್ ಅವರ ಬಾಣಸಿಗ ಮತ್ತು ಗೆಳೆಯನನ್ನು ತನಿಖೆಗೊಳಪಡಿಸುವುದಾಗಿ ತನಿಖಾದಳದ ಅಧಿಕಾರಿಗಳು ಹೇಳಿದ್ದಾರೆ.
ಜನವರಿ 2 ರಂದು ಪಂಜಾಬ್ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದ್ದರು. ದಾಳಿ ನಡೆಸಿದವರು ಜೈಷೆ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರೆಂದು ಶಂಕಿಸಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ