ಉಡುಪಿ ಪವರ್ ಕಾರ್ಪೋರೇಷನ್ ನಲ್ಲಿ ಆದಾನಿ ರು.11,500 ಕೋಟಿ ಹೂಡಿಕೆ

ಉಡುಪಿ ಪವರ್ ಕಾರ್ಪೋರೇಷನ್ (ಯುಪಿಸಿಎಲ್) ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಲು ರು.11,500 ಕೋಟಿ ಬಂಡವಾಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಉಡುಪಿ ಪವರ್ ಕಾರ್ಪೋರೇಷನ್ (ಯುಪಿಸಿಎಲ್) ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಲು ರು.11,500 ಕೋಟಿ ಬಂಡವಾಳ ತೊಡಗಿಸುವುದಾಗಿ ಅದಾನಿ ಕಂಪನಿ ಹೇಳಿದೆ. 
ಅದಾನಿ ಕಂಪನಿ ಯುಪಿಸಿಎಲ್ ನ್ನು ಕಳೆದ ವರ್ಷದ ಆರಂಭದಲ್ಲಷ್ಟೆ ಲ್ಯಾಂಕೊ ಇನ್ಫಾಟೆಕ್‍ನಿಂದ ರು.6,300 ಕೋಟಿಗೆ ಸ್ವಾಧೀನ ಮಾಡಿಕೊಂಡಿತ್ತು. ಯುಪಿಸಿಎಲ್‍ನ ಸದ್ಯದ ಉತ್ಪಾದನಾ ಸಾಮಥ್ರ್ಯ 1,200 ಮೆಗಾ ವ್ಯಾಟ್ ಆಗಿದೆ. ಇನ್ನೆರಡು ವರ್ಷದಲ್ಲಿ 800 ಮೆಗಾವ್ಯಾಟ್ ಸಾಮಥ್ರ್ಯದ ಎರಡು ಯೂನಿಟ್‍ಗಳನ್ನು ನಿರ್ಮಾಣ ಮಾಡುವುದಾಗಿ ಅದಾನಿ ಹೇಳಿದೆ. 
ಘಟಕದ ಸಾಮಥ್ರ್ಯ ಹೆಚ್ಚಿಸಲು ಕರ್ನಾಟಕ ಸರ್ಕಾರದ ಉನ್ನತಾಧಿಕಾರ ಸಮಿತಿಯಿಂದ ಅನುಮೋದನೆ ಪಡೆಯಲಾಗಿದೆ. ಶೀಘ್ರದಲ್ಲಿ ಈ ಕುರಿತು ಒಪ್ಪಂದಕ್ಕೆ ಸಹಿ ಮಾಡಲಾಗುವುದು ಎಂದು ಯುಪಿಸಿಎಲ್‍ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವಾ ತಿಳಿಸಿದ್ದಾರೆ. 
ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಯುಪಿಸಿಎಲ್ ವಿದೇಶಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳಲಿದೆ. ಉತ್ಪಾದಿಸಿ ಒಟ್ಟಾರೆ ವಿದ್ಯುತ್‍ನಲ್ಲಿ ಶೇ.90ರಷ್ಟು ಕರ್ನಾಟಕ ದ ವಿದ್ಯುತ್ ಕಂಪನಿಗಳು ಮತ್ತು ಶೇ.10 ರಷ್ಟು ಪಂಜಾಬ್‍ಗೆ ಮಾರಾಟ ಮಾಡಲು ಈಗಾಗಲೆ ಒಪ್ಪಂದ ಮಾಡಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com