ಬಿಹಾರದಲ್ಲಿ ಸಮೋಸ, ಸಿಹಿತಿಂಡಿ, ಸೊಳ್ಳೆ ಬತ್ತಿಗೆ ಶೇ. 13.5 ತೆರಿಗೆ!

ರಾಜ್ಯದಲ್ಲಿ ಏಪ್ರಿಲ್ 1 ರಿಂದ ದೇಸೀ ಮದ್ಯ ನಿಷೇಧಿಸಲು ತೀರ್ಮಾನಿಸಿರುವ ಬಿಹಾರ ಸರ್ಕಾರ ಇದೀಗ ರು. 4000 ಕೋಟಿ ನಷ್ಟದಲ್ಲಿರುವ ಖಜಾನೆ ತುಂಬಿಸಲು...
ಸಮೋಸ
ಸಮೋಸ
ಪಟ್ನಾ: ರಾಜ್ಯದಲ್ಲಿ ಏಪ್ರಿಲ್ 1 ರಿಂದ ದೇಸೀ ಮದ್ಯ ನಿಷೇಧಿಸಲು ತೀರ್ಮಾನಿಸಿರುವ ಬಿಹಾರ ಸರ್ಕಾರ ಇದೀಗ ರು. 4000 ಕೋಟಿ ನಷ್ಟದಲ್ಲಿರುವ ಖಜಾನೆ ತುಂಬಿಸಲು ಹೊಸ ತಂತ್ರ ಹೂಡಿದೆ.
ಆದ್ದರಿಂದಲೇ ನಿತೀಶ್ ಕುಮಾರ್ ನೇತೃತ್ವದ ಜೆಡಿ (ಯು)-ಆರ್‌ಜೆಡಿ ಸರ್ಕಾರ 1 ಕೆಜಿಗೆ ರು. 500ಕ್ಕಿಂತ ಹೆಚ್ಚು ಬೆಲೆಯಿರುವ ಸಿಹಿತಿಂಡಿ ಮತ್ತು ಸೊಳ್ಳೆ ಬತ್ತಿಗಳ ಮೇಲೆ ಶೇ. 13.5 ತೆರಿಗೆ ವಿಧಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ ಸಾಲ್ಟಿ ತಿಂಡಿಗಳಾದ ಸಮೋಸ, ಕಚೋರಿ ಮೇಲೆಯೂ ಶೇ. 13.5 ತೆರಿಗೆ ವಿಧಿಸಲಾಗುವುದು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಸಂಪುಟ ಸಭೆ ಸೇರಿದ ನಂತರವೇ ತೆರಿಗೆ ವಿಧಿಸುವ ಬಗ್ಗೆ ಅಂತಿಮ ತೀರ್ಮಾನ ಹೇಳಲಾಗುವುದು ಎಂದು ಬಲ್ಲಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com