ಕ್ಲಿನಿಕಲ್ ಟ್ರಯಲ್ ವೇಳೆ ಪ್ರಮಾದ: ಓರ್ವ ಮಿದುಳು ನಿಷ್ಕ್ರಿಯ, ಐವರು ಕೋಮಾಕ್ಕೆ

ಯುರೋಪಿಯನ್ ಲ್ಯಾಬೊರೆಟರಿ ಅಭಿವೃದ್ಧಿಪಡಿಸಿದ್ದ ಔಷಧವೊಂದರ ಪರೀಕ್ಷೆ ವೇಳೆ ಪ್ಯಾರಿಸ್ ನಲ್ಲಿ ಅವಘಡ ಸಂಭವಿಸಿದೆ. ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ಆರು ಜನರ ಪೈಕಿ ಒಬ್ಬರಿಗೆ...
ಆಸ್ಪತ್ರೆ
ಆಸ್ಪತ್ರೆ

ಪ್ಯಾರಿಸ್: ಯುರೋಪಿಯನ್ ಲ್ಯಾಬೊರೆಟರಿ ಅಭಿವೃದ್ಧಿಪಡಿಸಿದ್ದ ಔಷಧವೊಂದರ ಪರೀಕ್ಷೆ ವೇಳೆ ಪ್ಯಾರಿಸ್ ನಲ್ಲಿ ಅವಘಡ ಸಂಭವಿಸಿದೆ. ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ಆರು ಜನರ ಪೈಕಿ  ಒಬ್ಬರಿಗೆ ಮಿದುಳು ನಿಷ್ಕ್ರಿಯಗೊಂಡಿದ್ದು, ಐವರು ಕೋಮಾಕ್ಕೆ ಜಾರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾನ್ಸ್ ನ ಆರೋಗ್ಯ ಸಚಿವ ಮಾರಿಸೋಲ್ ಟೊರೈನ್, 'ಸದ್ಯಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ್ದ ಇತರ ಸ್ವಯಂ ಸೇವಕರನ್ನು ಹಿಂದೆ ಕಳುಹಿಸಲಾಗಿದೆ,'' ಎಂದು ಹೇಳಿದೆ. ಮೂಲಗಳ ಪ್ರಕಾರ, 'ನೋವು ನಿವಾರಕ ಔಷಧದ ಪರೀಕ್ಷೆ ನಡೆಯುತ್ತಿತ್ತು. ಔಷಧದಲ್ಲಿ ಗಾಂಜಾ ಗಿಡದ ಪದಾರ್ಥಗಳನ್ನು ಬಳಸಲಾಗಿತ್ತು,'' ಎಂದು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com