ಭಾರತ-ಚೀನಾ ಗಡಿಯಲ್ಲಿ 500 ಮಹಿಳಾ ಯೋಧರ ನಿಯೋಜನೆ

ಭಾರತ-ಚೀನಾ ಗಡಿಯಲ್ಲಿ ಭದ್ರತಾ ಪಡೆಗಳಲ್ಲಿ ಮಹಿಳಾ ಯೋಧರ ಸಂಖ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸದಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಂಚಕುಲಾ: ಭಾರತ-ಚೀನಾ ಗಡಿಯ ಭದ್ರತಾ ಪಡೆಗಳಲ್ಲಿ ಮಹಿಳಾ ಯೋಧರ ಸಂಖ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸದಾಗಿ ನೇಮಕವಾಗಿರುವ 500 ಭಾರತ-ಟಿಬೆಟನ್ ಗಡಿ ಪೊಲೀ ಸ್ (ಐಟಿಬಿಪಿ) ಮಹಿಳಾ ಯೋಧರನ್ನು ನಿಯೋಜನೆ ಮಾಡಿದೆ.

ಈ ಮೂಲಕ ಅತಿ ಎತ್ತರದ ಹಿಮಾಲಯದಲ್ಲಿ ನಿಯೋಜಿತವಾಗಿರುವ ಮೊದಲ ಮಹಿಳಾ ಯೋಧರ ತಂಡ ಎಂಬ ಗೌರವಕ್ಕೆ ಈ ಮಹಿಳೆಯರು ಪಾತ್ರರಾಗಲಿದ್ದಾರೆ. ಈ ಮಹಿಳಾ ಯೋಧರು ಹಿಮಾಲಯದ ಅತಿ ದುರ್ಗಮ ಗಡಿ ಪ್ರದೇಶಗಳನ್ನು ಕಾಯಲಿದ್ದಾರೆ.

ಇಲ್ಲಿನ 500 ಮಹಿಳಾ ಯೋಧರಿಗೆ 44 ವಾರಗಳ ಕಠಿಣ ತರಬೇತಿ ನೀಡಿದೆ. ಐಟಿಬಿಪಿ ಡೈರೆಕ್ಟರ್ ಜನರಲ್ ಕೃಷ್ಣ ಚೌಧರಿ ಅವರ ಸಮ್ಮುಖದಲ್ಲಿ ಮಹಿಳಾ ಯೋಧರು ಪಾಸಿಂಗ್ ಔಟ್ ಪೆರೇಡ್​ನಲ್ಲಿ ಪಾಲ್ಗೊಂಡು ಐಟಿಬಿಪಿಗೆ ಸೇರ್ಪಡೆಯಾದರು. ಮಾರ್ಚ್ ವೇಳೆಗೆ ಭಾರತ-ಚೀನಾ ಗಡಿ ಪ್ರದೇಶದ 20 ಸ್ಥಳಗಳಲ್ಲಿ ಮಹಿಳಾ ಯೋಧರನ್ನು ನಿಯೋಜನೆ ಮಾಡಲಾಗುತ್ತಿದೆ. ಸಮುದ್ರ ಮಟ್ಟದಿಂದ 8 ಸಾವಿರ ಅಡಿಯಿಂದ 14 ಸಾವಿರ ಅಡಿ ಎತ್ತರದಲ್ಲಿರುವ ಪ್ರದೇಶಗಳಿಗೆ ಮಹಿಳಾ ಯೋಧರು ನಿಯೋಜಿತರಾಗುತ್ತಿದ್ದಾರೆ.3,488 ಕಿ.ಮೀ. ಉದ್ದದ ಭಾತರ-ಚೀನಾ ಗಡಿಯಲ್ಲಿರುವ ವಾಸ್ತವಿಕ ಗಡಿ ರೇಖೆಯನ್ನು ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪೊಲೀಸ್ ಯೋಧರು ಕಾಯುತ್ತಿದ್ದಾರೆ.

1962ರ ಚೀನಾ ಆಕ್ರಮಣದ ನಂತರ ಐಟಿಬಿಪಿಯನ್ನು ಗಡಿಯಲ್ಲಿ ನಿಯೋಜಿಸಲಾಗಿತ್ತು. ಸೇನೆಯ ಒಟ್ಟು ಸಂಖ್ಯೆಯಲ್ಲಿ ಶೇಕಡಾ 40ರಷ್ಟು ಮಹಿಳಾ ಯೋಧರನ್ನು ನಿಯೋಜಿಸುವ ಉದ್ದೇಶ ಸರ್ಕಾರದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com