ಚೆನ್ನೈ: ತಮಿಳ್ನಾಡಿನಲ್ಲಿ ನಡೆಯಲಿರುವ ವಿಧಾನಸಭೆಯಲ್ಲಿ ಜಯಭೇರಿ ಬಾರಿಸಿ ಅಧಿಕ್ಕಾರಕ್ಕೇರುವ ವಿಶ್ವಾಸ ಹೊಂದಿರುವ ಸಿಎಂ ಜಯಲಲಿತಾ, ಚುನಾವಣಾ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಯಕರ್ತರಿಗೆ ಆದೇಶ ನೀಡಿದ್ದಾರೆ.
ಭಾನುವಾರ ನಡೆಯಲಿರುವ ಎಐಎಡಿಎಂಕೆ ಪಕ್ಷದ ಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ 99 ನೇ ಹುಟ್ಟುಹಬ್ಬ ಆಚರಣೆಗೆ ಮುನ್ನ ಮಾತನಾಡಿದ ಜಯಾ, ಆ ಬಾರಿಯ ಚುನಾವಣೆಯಲ್ಲಿ ನಾವೇ ಗೆಲ್ಲಬೇಕು ಎಂದಿದ್ದಾರೆ.
ಅದೇ ವೇಳೆ ಚುನಾವಣೆ ಸನ್ನಿಹಿತವಾಗುತ್ತಿದೆ, ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೇರುತ್ತೇವೆ ಎಂದು ಜಯಾ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಇಲ್ಲಿಯವರೆಗೆ ಯಾರೂ ಸಾಧಿಸಿದಂತಿರುವ ವಿಜಯ ನಾವು ಸಾಧಿಸಬೇಕು. ನಮ್ಮ ಈ ವಿಜಯ ಎಂಜಿಆರ್‌ಗೆ ಸಲ್ಲಿಸುವ ಕೀರ್ತಿಯಾಗಿರುತ್ತದೆ ಎಂದು ಜಯಾ ಹೇಳಿದ್ದಾರೆ.