
ನವದೆಹಲಿ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ಕುರಿತಂತೆ ಇಂದು ಬಿಜೆಪಿ ನಿಯೋಗ ರಾಷ್ಟಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಲಿದೆ.
ಬಿಜೆಪಿ ಮುಖಂಡರಾದ ಸಿದ್ದಾರ್ಥ್ ನಾಥ್, ಕೈಲಾಶ್ ವಿಜಯ ವರ್ಗೀಯ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜನವರಿ ತಿಂಗಳ ಆರಂಭದಲ್ಲಿ ಮಾಲ್ಡಾದಲ್ಲಿ ಪೊಲೀಸ್ ಠಾಣೆಗೆ ಕೆಲವು ಗಲಭೆ ಕೋರರು ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು. ಈ ಸಂಬಂಧ ರಾಜ್ಯಪಾಲರಿಗೂ ಈಗಾಗಲೇ ಬಿಜೆಪಿ ವರದಿ ಸಲ್ಲಿಸಿದೆ.
ಈ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ತಂಡವನ್ನು ರಚಿಸಿದ್ದಾರೆ. ಇನ್ನೂ ಕೇಂದ್ರ ಸರ್ಕಾರವೂ ಕೂಡ ಪ್ರಕರಣ ಸಂಬಂಧ ತನಿಖೆ ನಡೆಸಲು ತಂಡವನ್ನು ಕಳುಹಿಸಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಘಟನೆ ಸಂಬಂಧ ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಘಟನೆಗಳು ಸಮಾಲೋಚನೆ ನಡೆಸಿ ಭವಿಷ್ಯದಲ್ಲಿ ಇಂತ ಘಟನೆಗಳು ಸಂಭವಿಸಿದಂತೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚರ್ಚಿಸಿವೆ.
Advertisement