ಮನೋಹರ್ ಪರಿಕ್ಕರ್
ದೇಶ
ಹನಿ ಟ್ರ್ಯಾಪ್ ಪ್ರಕರಣ, ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ: ಪರ್ರಿಕರ್
ವಾಯುಸೇನಾ ಅಧಿಕಾರಿಗಳು ಹನಿ ಟ್ರ್ಯಾಪ್ ಬಲೆಗೆ ಬೀಳದಂತೆ ತಡೆಯಲು ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ..
ಜೈಪುರ: ವಾಯುಸೇನಾ ಅಧಿಕಾರಿಗಳು ಹನಿ ಟ್ರ್ಯಾಪ್ ಬಲೆಗೆ ಬೀಳದಂತೆ ತಡೆಯಲು ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ಹನಿ ಟ್ರ್ಯಾಪ್ ನಂತ ಪ್ರಕರಣಗಳು ಕೆಳ ಹಂತದ ನೌಕರರಿಗೆ ಸೀಮಿತವಾಗಿದ್ದು, ಉನ್ನತ ಮಟ್ಟದ ಅಧಿಕಾರಗಳು ಇಂತಹ ಬಲೆಗೆ ಬೀಳುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು. ಇನ್ನೂ ಇಂಥ ಕೆಲ ಪ್ರಕರಣಗಳಷ್ಟೇ ಬೆಳಕಿಗೆ ಬಂದಿದ್ದು, ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
30 ವರ್ಷದ ವಾಯು ಸೇನಾ ಅಧಿಕಾರಿ ರಂಜಿತ್ ಕೆ.ಕೆ ಎಂಬ ಸೇನಾ ಸಿಬ್ಬಂದಿ ರಹಸ್ಯಗಳನ್ನು ಬೇರೆಯವರಿಗೆ ನೀಡಿದ್ದರ ಹಿನ್ನೆಲೆಯಲ್ಲಿ ಆತನನ್ನು ಸೇನೆಯಿಂದ ಅಮಾನತು ಗೊಳಿಸಲಾಗಿದೆ. ಇನ್ನು ಸೇನೆಗೆ ನೇಮಕಾತಿ ಮಾಡುವಾಗ ಹಾಗೂ ತರಬೇತಿ ನೀಡುವಾಗ ತುಂಬಾ ಎಚ್ಚರಿಕೆ ವಹಿಸಲಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ