
ಜೈಪುರ: ರಾಜಸ್ತಾನ ಹಳ್ಳಿಯೊಂದರಲ್ಲಿ ನಡೆದಿರುವ ಈ ಘಟನೆ ತಾಲಿಬಾನ್ ಸಂಸ್ಕೃತಿಯನ್ನು ನೆನೆಪಿಗೆ ತರುತ್ತಿದೆ. ಯುವಕ ಮತ್ತು ಯುವತಿ ಜೊತೆಗಿದ್ದಿದ್ದನ್ನು ನೋಡಿದ ಗ್ರಾಮಸ್ಥರು ಇಬ್ಬರನ್ನು ಒಟ್ಟಿಗೆ ಮರಕ್ಕೆ ಕಟ್ಟಿ ಹಾಕಿದ್ದ ಘಟನೆ ರಾಜಸ್ತಾನದ ಬನ್ಸ್ವಾರ ಜಿಲ್ಲೆಯಲ್ಲಿ ನಡೆದಿದೆ.
ಲೋಹಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಉಂಬಡ ಎಂಬ ಗ್ರಾಮದಲ್ಲಿ ನಡೆದಿದೆ. 20 ವರ್ಷ ವಯಸ್ಸಿನ ಯುವಕ ಹಾಗೂ ಯುವತಿ ಜೊತೆಯಾಗಿದ್ದನ್ನು ಹುಡುಗಿಯ ಸಂಬಂಧಿಕರು ನೋಡಿದ್ದಾರೆ. ನಂತರ ಅವರಿಬ್ಬರನ್ನು ಬಂಧಿಸಿದ ಗ್ರಾಮಸ್ಥರು, ಇಬ್ಬರನ್ನು ಊರಿನ ಮರವೊಂದಕ್ಕೆ ಕಟ್ಟಿ ಹಾಕಿದ್ದಾರೆ.
ಈ ವಿಷಯ ಬಾಲಕನ ಪೋಷಕರಿಗೆ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಬಿಡಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಇಬ್ಬರನ್ನು ಕಟ್ಟಿ ಹಾಕಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಯುವಕ ಐವರ ವಿರುದ್ಧ ದೂರು ದಾಖಲಿಸಿದ್ದಾನೆ. ಆದರೆ ಇದುವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ.
Advertisement