ಸ್ವಚ್ಛ ಭಾರತದ ಗೆ ನವೀನ ಮಾದರಿಯ ಸಲಹೆಯನ್ನು ಪ್ರಧಾನಿ ಮುಂದಿಟ್ಟ ಕಾರ್ಯದರ್ಶಿಗಳ ತಂಡ

ಕೇಂದ್ರ ಸರ್ಕಾರದ ಕಾರ್ಯದರ್ಶಿಗಳ ತಂಡವೊಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸ್ವಚ್ಛ ಭಾರತ, ಶಿಕ್ಷಿತ್ ಭಾರತ್ ಯೋಜನೆಗಳ ಬಗೆಗಿನ ಕಲ್ಪನೆಗಳು ಮತ್ತು ಸಲಹೆಗಳನ್ನು ಚರ್ಚಿಸಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕೇಂದ್ರ  ಸರ್ಕಾರದ ಕಾರ್ಯದರ್ಶಿಗಳ ತಂಡವೊಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸ್ವಚ್ಛ ಭಾರತ, ಶಿಕ್ಷಿತ್ ಭಾರತ್ ಯೋಜನೆಗಳ ಬಗೆಗಿನ ಕಲ್ಪನೆಗಳು ಮತ್ತು ಸಲಹೆಗಳನ್ನು ಚರ್ಚಿಸಿದ್ದಾರೆ.

ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಉದ್ದೇಶದಿಂದ ಹೊಸ ಆಲೋಚನೆಗಳೊಂದಿಗೆ ಸಲಹೆಗಳನ್ನು ನೀಡುವಂತೆ ಪ್ರಧಾನಿ ಮೋದಿ ಅವರೇ ಕೆಲ ದಿನಗಳ ಹಿಂದೆ ಸರ್ಕಾರದ ಉನ್ನತ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿಗಳ ತಂಡ ಸ್ವಚ್ಛ ಭಾರತ, ಶಿಕ್ಷಿತ್ ಭಾರತ್ ಯೋಜನೆಗಳ ಬಗ್ಗೆ ಸಲಹೆಗಳನ್ನು ಪ್ರಧಾನಿ ಮೋದಿ ಮುಂದಿಟ್ಟಿದ್ದಾರೆ.

ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಮನೋಹರ್ ಪರಿಕ್ಕರ್ ಸಭೆಯಲ್ಲಿ ಭಾಗವಹಿಸಿದ್ದರು. ಸ್ವಚ್ಛ ಭಾರತ, ಶಿಕ್ಷಿತ್ ಭಾರತ್ ಯೋಜನೆಗಳ ಬಗ್ಗೆ   ಕಾರ್ಯದರ್ಶಿಗಳು ನೀಡಿದ ಸಲಹೆಗಳ ಬಗ್ಗೆ ಹಲವು ಸದಸ್ಯರು ಹಾಗೂ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ವಿವಿಧ ಇಲಾಖೆಗಳ ಆಡಳಿತದಲ್ಲಿ ಬದಲಾವಣೆ ತರುವುದಕ್ಕಾಗಿ ಮೋದಿ ಅವರೇ ರಚಿಸಿದ್ದ 8 ತಂಡಗಳ ಪೈಕಿ ನಾಲ್ಕು ತಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆಗಳನ್ನು ನೀಡಿವೆ. ಜ.12 ರಂದು ಶಕ್ತಿ ಸಂರಕ್ಷಣೆ ಮತ್ತು ದಕ್ಷತೆ ಕುರಿತಂತೆ ಕಾರ್ಯದರ್ಶಿಗಳ ತಂಡವೊಂದು ಪ್ರಧಾನಿ ಎದುರು ಸಲಹೆಗಳನ್ನು ಮಂಡಿಸಿವೆ. ಉತ್ತಮ ಆಡಳಿತ, ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ತಂತ್ರಗಳು, ಕೃಷಿ ಕೇಂದ್ರಿತ ಕ್ರಮಗಳು, ಶಿಕ್ಷಣ- ಆರೋಗ್ಯ, ಬಜೆಟ್ ಮತ್ತು ಪರಿಣಾಮಕಾರಿ ಅನುಷ್ಠಾನ ಕುರಿತು ನವೀನ ಮಾದರಿಯ ವಿಚಾರಗಳನ್ನು ಪ್ರಧಾನಿ ಮೋದಿ ಅವರಿಗೆ ಸಲಹೆ ನೀಡಲು ಕಾರ್ಯದರ್ಶಿಗಳಿಗೆ ಸೂಚಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com