ದಯಾಮರಣ ಬಗ್ಗೆ ನಿಲುವು ತಿಳಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ಮೆದುಳು ನಿಷ್ಕ್ರಿಯಗೊಂಡವರು ಮತ್ತು ಸಹಜ ಸ್ಥಿತಿಗೆ ಬರಲಾಗದೆ ಜೀವರಕ್ಷಕ ಸಾಧನಗಳಿಂದಷ್ಟೇ ಬದುಕುತ್ತಿರುವವರಿಗೆ ದಯಾಮರಣ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಮೆದುಳು ನಿಷ್ಕ್ರಿಯಗೊಂಡವರು ಮತ್ತು ಸಹಜ ಸ್ಥಿತಿಗೆ ಬರಲಾಗದೆ ಜೀವರಕ್ಷಕ ಸಾಧನಗಳಿಂದಷ್ಟೇ ಬದುಕುತ್ತಿರುವವರಿಗೆ ದಯಾಮರಣ ನೀಡುವ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್ ಶನಿವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 
ದಯಾಮರಣದ ಕುರಿತು ಸರ್ಕಾರೇತರ ಸಂಸ್ಥೆಯೊಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಪೀಠ, ನಿಲುವು ತಿಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು. 
ಸಹಜ ಸ್ಥಿತಿಗೆ ಮರುಳುವುದೇ ಇಲ್ಲ ಎಂಬ ರೋಗಿಗಳನ್ನು ಅವರ ಇಚ್ಛೆಗೆ ವಿರುದ್ಧವಾಗಿ, ಜೀವರಕ್ಷಕ ಸಾಧನಗಳಿಂದ ಜೀವಂತವಾಗಿಡುವುದು ಅವರನ್ನು ಮತ್ತಷ್ಟು ಹಿಂಸಿಸಿದಂತೆ. ಅವರ ಕುಟುಂಬಕ್ಕೆ ಆರ್ಥಿಕ ಹೊರೆಯೂ ಹೆಚ್ಚು,'' ಎಂದಿದೆ. ಮುಂದಿನ ವಿಚಾರಣೆ ಫೆ.1ಕ್ಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com