ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಮುಂದಿನ ತಿಂಗಳಿಗೆ ವಿಚಾರಣೆ ಮುಂದೂಡಿಕೆ

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಹಲವರು...
ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಸಂದರ್ಭದ ಚಿತ್ರ(ಸಂಗ್ರಹ)
ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಸಂದರ್ಭದ ಚಿತ್ರ(ಸಂಗ್ರಹ)

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಹಲವರು ಕೋರಿರುವ ಹಿನ್ನೆಲೆಯಲ್ಲಿ ಕೇಸಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲ ಮುಂದೂಡಿದೆ.

ಭಾರತೀಯ ಜನತಾ ಪಕ್ಷದ ಮಾಜಿ ಮುಖಂಡರ ವಿರುದ್ಧ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪಿತೂರಿ ನಡೆಸಿರುವ ಕೇಸನ್ನು ಕೈ ಬಿಟ್ಟಿರುವುದನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ. ಕೇಂದ್ರ ತನಿಖಾ ದಳ ಬಿಜೆಪಿ ನಾಯಕರ ವಿರುದ್ಧ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಇಲ್ಲಿ ಎರಡು ಕೇಸುಗಳಿವೆ. 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸ ಮಾಡುವಾಗ ಅಯೋಧ್ಯೆಯ ರಾಮ ಕಥಾ ಕುಂಜ್ ವೇದಿಕೆಯಲ್ಲಿ ಇದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ವಿರುದ್ಧ ಮತ್ತು ಇತರ ಕರಸೇವಕರ ವಿರುದ್ಧ ಕೂಡ ಕೇಸು ದಾಖಲಿಸಲಾಗಿದೆ.

ಆಡ್ವಾಣಿ ಮತ್ತು ಇತರ 20 ಮಂದಿ ಕರಸೇವಕರ ವಿರುದ್ಧ ಸಿಬಿಐ 153ಎ, 153ಬಿ,505 ಸೆಕ್ಷನ್ ಗಳಡಿಯಲ್ಲಿ ದೂರು ದಾಖಲಿಸಿ ಆರೋಪಪಟ್ಟಿಯನ್ನು ಸಿಬಿಐಗೆ ಸಲ್ಲಿಸಿದೆ. ಪಿತೂರಿ ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಭಾರತೀಯ ದಂಡಸಂಹಿತೆ 120ರಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅದನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com